ಉಪ್ಪಾರರ ಸಂಘಟನೆ ಅವಶ್ಯ

CLK SABHE 20
Published on

ಚಳ್ಳಕೆರೆ: ಉಪ್ಪಾರ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದ್ದು, ಮುಖ್ಯವಾಹಿನಿಗೆ ತರಲು ಸಂಘಟನೆ ಅನಿವಾರ್ಯ ಎಂದು ಸಮಾಜದ ತಾಲೂಕು ಅಧ್ಯಕ್ಷ ಯಲ್ಲಪ್ಪ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ 40 ಲಕ್ಷ ಉಪ್ಪಾರ ಜನ ಸಂಖ್ಯೆ ಇದೆ. ಸಂಘಟನೆ ಕೊರತೆಯಿಂದ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂದು ಬೇಸರಿದರು.

ಎಲ್‌ಐಸಿ ರಂಗಸ್ವಾಮಿ ಮಾತನಾಡಿ, ರಾಜ್ಯದ 8 ವಿಧಾನಸಭಾ ಕ್ಷೇತ್ರ, 7 ಲೋಕಸಭಾ ಕ್ಷೇತ್ರಗಳಲ್ಲಿ ಉಪ್ಪಾರ ಸಮುದಾಯ ನಿರ್ಣಾಯಕ ಮತದಾರರ ಸಂಖ್ಯೆ ಹೊಂದಿದೆ. ಇದುವರೆಗೂ ಸಮಾಜದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಸಿಕ್ಕಿಲ್ಲ ಎಂದು ಹೇಳಿದರು.

ಮುಖಂಡರಾದ ಮುಸ್ಟೂರು ಲಿಂಗಪ್ಪ, ಎಂ.ಚಿದಾನಂದ, ಪರಮೇಶ್ವರಪ್ಪ, ನೀಲಕಂಠಪ್ಪ, ರಾಮಕೃಷ್ಣಪ್ಪ, ವಿಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net