ಸಾಹಿತ್ಯ ರಚನೆಗಷ್ಟೇ ಬಂಡಾಯ ಇಲ್ಲ

CLK HPPC COLLEGE 09
Published on

ಚಳ್ಳಕೆರೆ: ಬಂಡಾಯ ಸಾಹಿತ್ಯ ಸಂಘಟನೆ ಬರೀ ಸಾಹಿತ್ಯ ರಚನೆಗಷ್ಟೇ ಸೀಮಿತವಾಗಿರದೆ ಸಮಾಜಘಾತುಕ ಘಟನೆಗಳನ್ನು ಖಂಡಿಸುವ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಹೇಳಿದರು.

ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಸೋಮವಾರ ರಾಜ ರಾಜೇಶ್ವರಿ ಸಿನಿ ಆರ್ಟ್ಸ್ ವತಿಯಿಂದ ಆಯೋಜಿಸಿದ್ದ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಬಯಲಾಟದ ಭೀಮಣ್ಣ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಹಿತ್ಯದಿಂದ ಜನತೆಗೆ ಸಮಾಜದ ಸೂಕ್ಷ್ಮತೆ ತಿಳಿಸುವ ಕೆಲಸವಾಗಬೇಕು. ಯುವ ಸಮುದಾಯವನ್ನು ಸಾಹಿತ್ಯ ಕೃಷಿಯತ್ತ ಸೆಳೆಯುವ ಕಾರ್ಯವಾದರೆ ಪ್ರಗತಿ ಸಾಧ್ಯವಾಗುತ್ತದೆ ಎಂದರು.

ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಸಮಾಜಕ್ಕೆ ಚಲನಶೀಲತೆ ಇದೆ. ವರ್ತಮಾನದ ಬದಲಾವಣೆಗಳಿಗೆ ತಕ್ಕಂತೆ ಮನುಷ್ಯ ಬದುಕಬೇಕಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ಬಯಲಾಟದ ಭೀಮಣ್ಣ ಚಲನಚಿತ್ರ ಕೇವಲ ಮನರಂಜನೆ ಸಿನಿಮಾವಲ್ಲ. ಇದು ಗ್ರಾಮೀಣರ ಜೀವನ ಶೈಲಿ, ಜನಪದ ಕಲೆ, ಕಲಾವಿದರ ಸಂಘರ್ಷದ ಬದುಕಿನ ನೈಜತೆ ಕಟ್ಟಿಕೊಟ್ಟ ಚಿತ್ರವಾಗಿದೆ ಎಂದರು.

ಪ್ರಾಚಾರ್ಯ ಪ್ರೊ.ಜಿ.ವೆಂಕಟೇಶ್, ಡಾ.ಜಿ.ವಿ.ರಾಜಣ್ಣ, ಡಾ.ಕೆ.ಚಿತ್ತಯ್ಯ, ಪ್ರೊ.ಎಸ್.ಪಾಪಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net