ಅಡ್ಡಾದಿಡ್ಡಿ ಆಟೋ ಓಡಿಸಿದರೆ ದಂಡ

CLK POLICE 25
Published on

ಚಳ್ಳಕೆರೆ: ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಅಡ್ಡಾದಿಡ್ಡಿ ವಾಹನ ಓಡಿಸಿದರೆ ದಂಡ ತೆರಬೇಕಾಗುತ್ತದೆ ಎಂದು ಸಿಪಿಐ ಈ. ಆನಂದ್ ಆಟೋ ಚಾಲಕರಿಗೆ ಎಚ್ಚರಿಕೆ ನೀಡಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಸಮೀಪ ಮಂಗಳವಾರ ಕೈಗೊಂಡ ಸರ್ವೆ ಕಾರ್ಯದಲ್ಲಿ ಪಾಲ್ಗೊಂಡು ಆಟೋ ಚಾಲಕರಿಗೆ ರಸ್ತೆ ನಿಯಮ ಕುರಿತು ಮಾತನಾಡಿದರು.

ಜನನಿಬಿಡ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಆಟೋ ನಿಲ್ಲಿಸಬಾರದು. ಆಟೋ ಮತ್ತು ಬೈಕ್ ನಿಲುಗಡೆಗಾಗಿ ಸೂಕ್ತ ಸ್ಥಳ ನಿಗದಿಪಡಿಸುತ್ತಿದ್ದು ಅಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಬೇಕು. ಶಾಲಾ ವಲಯ, ಆಸ್ಪತ್ರೆ, ಬಸ್ ನಿಲ್ದಾಣ ಇತ್ಯಾದಿ ಪ್ರದೇಶದಲ್ಲಿ ನಿಧಾನವಾಗಿ ವಾಹನ ಓಡಿಸಬೇಕು. ಪ್ರಯಾಣಿಕರೊಂದಿಗೆ ಪ್ರೀತಿಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.

ಪೊಲೀಸ್ ಉಪ ನಿರೀಕ್ಷಕರಾದ ಎಸ್.ಡಿ. ನೂರ್ ಅಹಮ್ಮದ್, ಕೆ. ಸತೀಶ್‌ನಾಯ್ಕ, ಡಿ. ಶಿವಕುಮಾರ್, ಸಿಬ್ಬಂದಿ ಹನುಮಂತರೆಡ್ಡಿ, ಕುಮಾರಸ್ವಾಮಿ, ತಿರುಕಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net