ಹಸಿವಿದ್ದವರಿಗೆ ಅನ್ನ ಸಿಗುವಂತಾಗಲಿ

CLK MP 01
Published on

ಚಳ್ಳಕೆರೆ: ಲಾಕ್‌ಡೌನ್ ಸಮಸ್ಯೆಯಲ್ಲಿ ನಗರಕ್ಕೆ ಬರುವ ಗ್ರಾಮೀಣ ಜನರು ಸೇರಿ ಬಡವರ ಹಸಿವು ನೀಗಿಸಲು ಭೋಜನಾಲಯ ಆರಂಭಿಸಲಾಗಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ಸಾರಿಗೆ ಬಸ್ ನಿಲ್ದಾಣದ ಸಮೀಪ ಆರಂಭಗೊಂಡ ಉಚಿತ ಭೋಜನಾಲಯಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿ, ಹಸಿದ ಜನರಿಗೆ ಊಟ ಸಿಗುವಂತೆ ಉಳ್ಳವರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಕರೊನಾ ಸಾಂಕ್ರಾಮಿಕ ವೈರಸ್ ನಿಯಂತ್ರಣ ಕಾರ್ಯ ಚಟುವಟಿಕೆಯಲ್ಲಿ ಹೋಟೆಲ್ ವ್ಯವಸ್ಥೆ ಮತ್ತು ಅಂಗಡಿ ವ್ಯವಹಾರಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ಭೋಜನಾಲಯದಲ್ಲಿ ಸದಾ ಊಟ ಕೊಡುವ ವ್ಯವಸ್ಥೆ ಆಗಬೇಕು ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಉಚಿತ ಭೋಜನಾಲಯದಲ್ಲಿ ಬೆಳಗ್ಗೆ 8ರಿಂದ 11ರ ವರೆಗೆ ತಿಂಡಿ, ಮಧ್ಯಾಹ್ನ 1ರಿಂದ 4ರ ವರೆಗೆ ಊಟದ ವ್ಯವಸ್ಥೆ ಇರುತ್ತದೆ. ಊಟ ತಯಾರಿಕೆ ಮತ್ತು ನಿರ್ವಹಣೆಗೆ 15 ಜನ ಸಿಬ್ಬಂದಿ ಇದ್ದಾರೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜರೆಡ್ಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮ್‌ದಾಸ್, ಮಂಡಲ ಮಾಜಿ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ಕಾರ್ಯದರ್ಶಿ ಕರೀಕೆರೆ ತಿಪ್ಪೇಸ್ವಾಮಿ, ಬಿ.ಎಸ್.ಶಿವಪುತ್ರಪ್ಪ, ಮಾತೃಶ್ರೀ ಮಂಜುನಾಥ, ದಿನೇಶ್ ರೆಡ್ಡಿ, ಬಿ.ತಿಪ್ಪೇಸ್ವಾಮಿ, ಕಾಂತರಾಜ್, ಸಿದ್ದೇಶ್ ಯಾದವ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net