ಬಡವರಿಗೆ ಬಲಿಜ ಸಮಾಜ ನೆರವು

CLK VITARANE 03
Published on

ಚಳ್ಳಕೆರೆ: ನಮ್ಮದು ಧರ್ಮ, ಸಂಸ್ಕಾರದ ನೆಲೆಗಟ್ಟಿನ ಮೇಲೆ ನಿಂತಿರುವ ದೇಶ. ಇಲ್ಲಿ ಕರೊನಾ ವೈರಸ್ ಅಷ್ಟಾಗಿ ಪರಿಣಾಮ ಬೀರದೆಂದು ವೆಂಕಟಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ಹೇಳಿದರು.

ನಗರದ ಚಿನ್ಮಯಿ ಶಾಲೆ ಆವರಣದಲ್ಲಿ ಭಾನುವಾರ ಶ್ರೀ ಯೋಗಿನಾರಾಯಣ ಬಲಿಜ ಸಂಘದಿಂದ ಸಮಾಜದ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದರು.

ಶ್ರೀಮಂತ ರಾಷ್ಟ್ರಗಳೂ ಕೂಡ ಕರೊನಾ ಮಹಾಮಾರಿಗೆ ಶರಣಾಗತಿಯಾಗಿವೆ. ಆದರೆ, ಬಹುಸಂಸ್ಕೃತಿ ಮೇಳೈಸಿರುವ ಭಾರತದಲ್ಲಿನ ಧಾರ್ಮಿಕ ನಂಬಿಕೆ, ಆಚರಣೆಗಳ ಕಾರ್ಯಫಲದಿಂದ ಕರೊನಾಕ್ಕೆ ಸಾವಿಗೀಡಾಗುವವರ ಸಂಖ್ಯೆ ಕಡಿಮೆ ಇದೆ ಎಂದು ತಿಳಿಸಿದರು.

ಯೋಗಿ ನಾರಾಯಣ, ಕಾಲಜ್ಞಾನಿ ವೀರಬ್ರಹ್ಮಯ್ಯ ಅವರು ಭವಿಷ್ಯದಲ್ಲಿ ಮನುಕುಲಕ್ಕೆ ಎದುರಾಗುವ ಗಂಡಾಂತರಗಳನ್ನು ದಾಖಲಿಸಿದ್ದಾರೆ. ಯೋಗಿ ನಾರಾಯಣ ಗುರು ಬರೆದಂತೆ 21ನೇ ಶತಮಾನಕ್ಕೆ ರೋಗ ಹರಡಿ ಲಕ್ಷಗಟ್ಟಲೇ ಜನ ಜೀವ ಕಳೆದುಕೊಳ್ಳಲಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ನಾವುಗಳು ಇಂತಹ ಮಹಾಪುರುಷರ ಬದುಕಿನ ಆದರ್ಶ ರೂಢಿಸಿಕೊಳ್ಳುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಸಂಘದ ಪದಾಧಿಕಾರಿಗಳಾದ ವೆಂಕಟೇಶಪ್ಪ, ಬಿ.ವಿ.ಚಿದಾನಂದಮೂರ್ತಿ, ವಿಜಯಕುಮಾರ್, ಟಿ.ಜೆ.ತಿಪ್ಪೇಸ್ವಾಮಿ, ನರಸಿಂಹಪ್ಪ, ಲಕ್ಷ್ಮೀನಾರಾಯಣ, ಆನಂದಪ್ಪ, ಸಂಜೀವ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net