ರೆಡ್ಡಿಹಳ್ಳಿ ಜನರ ಅಳಲು

CLK REDDYHALLI 17
Published on

ಚಳ್ಳಕೆರೆ: ರೆಡ್ಡಿಹಳ್ಳಿ ಎಸ್‌ಸಿ ಕಾಲನಿಯಲ್ಲಿ ಜಾನುವಾರುಗಳಿಗೆ ಕಟ್ಟಿಸಿರುವ ನೀರಿನ ತೊಟ್ಟಿಯೇ ಜನರ ಕುಡಿಯುವ ನೀರಿಗೆ ಆಧಾರವಾಗಿದೆ.

ತೊಟ್ಟಿಗೆ ನೀರು ಪೂರೈಕೆ ಮಾಡುವ ಪೈಪ್‌ನಲ್ಲಿ ಕೊಳಚೆ ತುಂಬಿಕೊಂಡಿದೆ. ಎಷ್ಟೋ ಸಾರಿ ಕುಡಿಯುವ ನೀರಿಗೆ ಕೊಳೆಚೆ ನೀರು ಸೇರಿ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ಕಾಲನಿ ಜನರು ಈ ತೊಟ್ಟಿಯಲ್ಲೇ ಕುಡಿಯುವ ನೀರು ಹಿಡಿದುಕೊಳ್ಳುವ ಪರಿಸ್ಥಿತಿ ಇದೆ ಎಂದು ಸ್ಥಳೀಯರು ದೂರಿದ್ದಾರೆ.

ಕಾಲನಿ ಭಾಗದಲ್ಲಿ ಈ ತೊಟ್ಟಿ ನೀರಿನ ವ್ಯವಸ್ಥೆ ಹೊರತಾಗಿ ಮತ್ತೊಂದು ಸಾರ್ವಜನಿಕ ನಲ್ಲಿ ವ್ಯವಸ್ಥೆ ಇದೇ. ಆದರೆ, ನಲ್ಲಿ ದುರಸ್ತಿ ಇರುವ ದೂರಿದೆ ಕೂಡಲೆ ಸರಿಪಡಿಸಲಾಗುವುದು ಎಂದು ಗೋಪನಹಳ್ಳಿ ಪಿಡಿಒ ಶಶಿಕಲಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net