ಚಳ್ಳಕೆರಮ್ಮ ಜಾತ್ರೆಗೆ ಚಾಲನೆ

CLK CHALLAKERAMMA JAATRE 02
Published on

ಚಳ್ಳಕೆರೆ: ಫಾಲ್ಗುಣ ಶುದ್ಧ ದ್ವಾದಶಿ ಉಪರಿ ತ್ರಯೋದಶಿಯಲ್ಲಿ ನಡೆಯುವ ಗ್ರಾಮ ದೇವತೆ ಚಳ್ಳಕೆರಮ್ಮ ಜಾತ್ರಾ ಮಹೋತ್ಸವಕ್ಕೆ ಸೋಮವಾರ ವಿವಿಧ ಪೂಜಾ ಕಾರ್ಯಗಳ ಮೂಲಕ ವಿಧ್ಯುಕ್ತ ಚಾಲನೆ ದೊರೆಯಿತು.

ದೊಡ್ಡೇರಿ ಸಮೀಪದ ಜೀವನದಿ ಜಲಧಿಗೆ ಗ್ರಾಮ ದೇವತೆಯನ್ನು ಕಲಾ ತಂಡಗಳ ಮೆರವಣಿಗೆಯೊಂದಿಗೆ ಕರೆದೊಯ್ದು ಗಂಗಾ ಪೂಜೆ ನೆರವೇರಿಸಲಾಗುತ್ತದೆ. 3ರಂದು ದಿನ ಬಲ ಕಳಶ, ದೇವಿಗೆ ಉಡಿ ತುಂಬುವುದು, ಮಾಂಗಲ್ಯಧಾರಣ, ಕೋಣನ ಉತ್ಸವ ನಡೆಯಲಿದೆ.

4ರಂದು ಹಿಟ್ಟಿನಾರತಿ, ಬೇವಿನ ಸೀರೆ ಉತ್ಸವ ಮತ್ತಿತರ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೆ ಕೊನೆ ದಿನವಾದ 5ರಂದು ಮುಕ್ತಿಬಾವುಟ ಹರಾಜು ಬಳಿಕ ಸಿಡಿ ಉತ್ಸವ, ಪೋತರಾಜರ ವೀರನಾಟ್ಯ, ಕೀಲುಕುದುರೆ, ಮರಗಾಲು ಕಲಾವಿದರ ನಾಟ್ಯ ಸೇವೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net