ಪುಠ್ಯಪುಸ್ತಕ ಖರೀದಿಗೆ ಕಾಲಾವಕಾಶ ಕೊಡಿ

yadalagatte jganath
Published on

ಚಳ್ಳಕೆರೆ: ಖಾಸಗಿ ಅನುದಾನರಹಿತ ಶಾಲೆಗಳಿಗೆ ಜೂ. 15ರಂದು ಪಠ್ಯಪುಸ್ತಕ ಖರೀದಿಸುವಂತೆ ಸರ್ಕಾರ ಆದೇಶಿಸಿದ್ದು, ಈ ಕಾಲಾವಕಾಶವನ್ನು ವಿಸ್ತರಿಸಬೇಕು ಎಂದು ತಾಲೂಕು ಅನುದಾನರಹಿತ ಶಾಲಾ ಒಕ್ಕೂಟದ ಉಪಾಧ್ಯಕ್ಷ ಯಾದಲಗಟ್ಟೆ ಜಗನ್ನಾಥ ತಿಳಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಖಾಸಗಿ ಶಾಲೆಗಳಿಗೆ ಬರಬೇಕಾಗಿರುವ 1300 ಕೋಟಿ ರೂ. ಆರ್‌ಟಿಇ ಹಣ ಬಿಡುಗಡೆ ಮಾಡಿಲ್ಲ. ಶೈಕ್ಷಣಿಕ ಆರಂಭದ ಅವಧಿಯಲ್ಲಿ ಖಾಸಗಿ ಶಾಲೆಗಳ ನಿರ್ವಹಣೆ ಕುಂಠಿತವಾಗಿದ್ದು, ಶಿಕ್ಷಕರಿಗೆ ಮಾಸಿಕ ವೇತನ ನೀಡುವುದು ಕಷ್ಟವಾಗಿದೆ.

ಶಾಲೆಗಳು ಆರಂಭವಾಗುವ ತನಕ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರವೇ ವೇತನ ನೀಡಬೇಕು. ಶಾಲೆ ಆರಂಭವಾದಗಲೇ ಪಠ್ಯ ಪುಸ್ತಕಗಳು ಖರೀದಿ ಮಾಡಿಕೊಳ್ಳಲು ಕಾಲಾವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net