ಜ್ವರಪೀಡಿತ ಬಾಲಕಿಗೆ ಉಚಿತ ಚಿಕಿತ್ಸೆ

CLK HOSPITAL 04
Published on

ಚಳ್ಳಕೆರೆ: ಜ್ವರ ಪೀಡಿತ ಬಾಲಕಿಗೆ ಚಿಕಿತ್ಸೆ ನೀಡುವಲ್ಲಿ ನಗರದ ಖಾಸಗಿ ಆಸ್ಪತ್ರೆ ನಿರ್ಲಕ್ಷೃ ವಹಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾಲಕಿಯ ಪಾಲಕರ ಬಳಿ ಹಣವಿಲ್ಲವೆಂಬ ಕಾರಣಕ್ಕೆ ಕೈಗೆ ಹಾಕಿದ್ದ ಗ್ಲೂಕೋಸ್ ಅರ್ಧ ಇರುವಾಗಲೇ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದರು ಎಂದು ದೂರಲಾಗಿತ್ತು. ಈ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ವಿಚಾರಣೆ ನಡೆಸಿದರು. ಘಟನೆಗೆ ಸಿಬ್ಬಂದಿ ನಿರ್ಲಕ್ಷವೇ ಕಾರಣ. ಈ ಕುರಿತು ನೋಟಿಸ್ ನೀಡಲಾಗುವುದು ಎಂದು ಡಾ. ಸಿ.ಎಲ್.ಪಾಲಾಕ್ಷ ತಿಳಿಸಿದರು.

ಎಚ್ಚೆತ್ತ ಖಾಸಗಿ ವೈದ್ಯರು: ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಆಸ್ಪತ್ರೆ ವೈದ್ಯರು, ಬಾಲಕಿಯನ್ನು ಪುನಃ ಆಸ್ಪತ್ರೆಗೆ ದಾಖಲಿಸಿಕೊಂಡು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.

ಕರವೇ ಆಗ್ರಹ: ನಗರದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಅನೇಕ ಕಾನೂನು ಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಎಂದು ಕರವೇ ಅಧ್ಯಕ್ಷ ಟಿ.ಜೆ. ವೆಂಕಟೇಶ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net