ಗರ್ಭಿಣಿಯರಿಗೆ 2 ಸಾವಿರ ರೂ.

CLK VITARANE 07
Published on

ಚಳ್ಳಕೆರೆ: ಗರ್ಭಿಣಿಯರು ಆರೋಗ್ಯ ಇಲಾಖೆ ಸೌಲಭ್ಯಗಳ ಸದುಪಯೋಗ ಪಡೆದು ಸದೃಢ ಆರೋಗ್ಯ ಹೊಂದಬೇಕು ಎಂದು ಟಿಎಚ್‌ಒ ಡಾ.ಎನ್.ಪ್ರೇಮಸುಧಾ ಹೇಳಿದರು.

ನಗರದ ಹಳೇಟೌನ್ ನಿವಾಸಿ ಗರ್ಭಿಣಿ ಶ್ವೇತಾ ಅವರಿಗೆ ಇಮೋಗ್ಲೋಬಿನ್ ಅಂಶ ಕಡಿಮೆ ಇರುವ ಕಾರಣ, ರಕ್ತ ಹಾಕಿಸಿಕೊಳ್ಳಲು ಮಹಿಳಾ ಆರೋಗ್ಯ ಸಮಿತಿ ಯೋಜನೆಯಡಿ 2 ಸಾವಿರ ರೂ. ಮೌಲ್ಯದ ಚೆಕ್ ವಿತರಿಸಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ ಮಾತನಾಡಿ, ಆರೋಗ್ಯವಂತ ಶಿಶು ಜನನಕ್ಕೆ ತಾಯಂದಿರ ಪಾತ್ರ ದೊಡ್ಡದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net