ಪೀರ್ಲಾ ದೇವಸ್ಥಾನ ಜಾಗ ಖಾತೆ ಬದಲಾವಣೆ ಬೇಡ

Challakere, Pirla Devara, Khathe change, petition,
Published on

ಚಳ್ಳಕೆರೆ: ನಗರದ ಬಳ್ಳಾರಿ ರಸ್ತೆಯ ಪೀರ್ಲಾ ದೇವಸ್ಥಾನ ಜಾಗವನ್ನು ಯಾವುದೇ ವ್ಯಕ್ತಿ ಹೆಸರಿಗೆ ಖಾತೆ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿ ಸಾರ್ವಜನಿಕರು ಮತ್ತು ಪಿರ‌್ಲ ದೇವರ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಎನ್.ರಘುಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಸುಮಾರು 50 ವರ್ಷಗಳ ಹಿಂದೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಪೀರ್ಲಾ ದೇವಸ್ಥಾನ ನಿರ್ಮಿಸಲಾಗಿದೆ. ಇದರ ನಿರ್ವಹಣೆ ಮತ್ತು ಜೀರ್ಣೋದ್ಧಾರಕ್ಕೆ ವಿವಿಧ ಜಾತಿ, ಧರ್ಮದವರು ಒಗ್ಗೂಡಿ ಸಹಕರಿಸುತ್ತಿದ್ದಾರೆ. ಸಾರ್ವಜನಿಕರ ಸಹಕಾರದಿಂದಲೇ ಪ್ರತಿ ವರ್ಷ ಪೀರ‌್ಲ ಹಬ್ಬ ಆಚರಿಸಲಾಗುತ್ತದೆ ಎಂದು ಗಮನ ಸೆಳೆದರು.

ಇತ್ತೀಚಿನ ಬೆಳವಣಿಗೆಯಲ್ಲಿ ವಕ್ಫ್ ಬೋರ್ಡ್‌ನವರು ತಮ್ಮ ಹೆಸರಿಗೆ ಇ-ಸ್ವತ್ತು ಮಾಡಿಕೊಡಲು ಅರ್ಜಿ ಸಲ್ಲಿಸಿರುವ ಮಾಹಿತಿ ತಿಳಿದು ಬಂದಿದೆ. ಇದನ್ನು ಸಂಬಂಧಿತ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ. ಈವರೆಗೂ ವಿವಿಧ ಧರ್ಮಗಳ ನಡುವೆ ಶಾಂತಿಯುತವಾಗಿ ಜಾತ್ರೆ, ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆದು ಬಂದಿರುವ ಪೀರ‌್ಲ ದೇವರ ದೇವಸ್ಥಾನ ಈವರೆಗೂ ಇದ್ದಂತೆಯೇ ಉಳಿಯಬೇಕಿದೆ ಎಂದು ಆಗ್ರಹಿಸಿದರು.

ನಗರಸಭೆ ಸದಸ್ಯರಾದ ಸಿ.ಶ್ರೀನಿವಾಸ್, ಪ್ರಶಾಂತ್ ಕುಮಾರ್, ಟಿ.ಮಲ್ಲಿಕಾರ್ಜುನ, ನಾಮನಿರ್ದೇಶನ ಸದಸ್ಯರಾದ ಎಂ.ಇಂದ್ರೇಶ್, ಮಾಜಿ ಸದಸ್ಯ ಎಂ.ಚೇತನ್‌ಕುಮಾರ್, ಟಿ.ಜೆ.ತಿಪ್ಪೇಸ್ವಾಮಿ, ಎಸ್.ಕೆ.ಕಾಟಲಿಂಗಯ್ಯ, ಎಚ್.ರಾಮಣ್ಣ, ಚಿತ್ರಯ್ಯನಹಟ್ಟಿ ಸ್ವಾಮಿ, ಪಿ.ಬಸವರಾಜ, ಜಿ.ರುದ್ರಪ್ಪ, ಪಿ.ರಾಘವೇಂದ್ರ, ಸುರೇಶ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net