ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ

CLK CONGRESS 04
Published on

ಚಳ್ಳಕೆರೆ: ಪರಶುರಾಂಪುರದಲ್ಲಿ ಆಯೋಜಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಗುರುವಾರ ಒತ್ತಾಯಿಸಿದ್ದಾರೆ.

ಬಿಜೆಪಿ ಮುಖಂಡರು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಲ್ಲಿ ಜಾತಿ, ಧರ್ಮ ನಡುವೆ ವೈಷಮ್ಯ ಹುಟ್ಟುವ ರೀತಿ ಭಾಸವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್, ತಾಪಂ ಸದಸ್ಯ ಟಿ.ಗಿರಿಯಪ್ಪ, ನಗರಸಭಾ ಸದಸ್ಯ ಕೆ.ವೀರಭದ್ರಯ್ಯ, ಮುಖಂಡರಾದ ಪಿ.ತಿಪ್ಪೇಸ್ವಾಮಿ, ಎಸ್.ಎಚ್.ಸೈಯದ್, ಡಿ.ಟಿ.ಭೂತಲಿಂಗಪ್ಪ, ಸಿದ್ದಾಪುರ ಶೇಖರಪ್ಪ, ಸಿ.ಜಿ.ಜಯಕುಮಾರ್, ಕರೀಕೆರೆ ರಾಜಣ್ಣ, ಆರ್.ಪ್ರಸನ್ನಕುಮಾರ್, ಜಿ.ಬಸವರಾಜ, ಟಿ.ಸಿದ್ದಣ್ಣ, ರಂಗಸ್ವಾಮಿ, ಜಾಜೂರು ವೆಂಕಟೇಶ್, ಜಿವಿಕೆ ಮಲ್ಲಿಕಾರ್ಜುನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net