ಅನಾಥ ಮಕ್ಕಳಿಗೆ ಸಹಾಯ ಹಸ್ತ

CLK MLA BHETI 03
Published on

ಚಳ್ಳಕೆರೆ: ಲಾರಿ ಟೈರ್ ಸಿಡಿದು ದಂಪತಿ ಸಾವಿನಿಂದ ಅನಾಥರಾಗಿದ್ದ ಮಕ್ಕಳಿಗೆ ಶಾಸಕ ಟಿ.ರಘುಮೂರ್ತಿ 10 ಸಾವಿರ ರೂ. ಧನಸಹಾಯ ನೀಡಿ ಸಾಂತ್ವನ ಹೇಳಿದರು.

ತಾಲೂಕಿನ ಕಾಲುವೇಹಳ್ಳಿಗೆ ಸೋಮವಾರ ಭೇಟಿ ನೀಡಿದ ಅವರು, ಮೃತ ದಂಪತಿಗೆ ಆರು ಮಕ್ಕಳಿದ್ದು ಇದರಲ್ಲಿ ಒಬ್ಬ ಕಿವುಡ, ಇನ್ನೊಬ್ಬ ಮಗಳು ಮೂಕಿ ಇದ್ದು, ಇವರಿಗೆ ಕೂಡಲೇ ಅಂಗವಿಕಲರ ಕಲ್ಯಾಣ ನಿಧಿಯಿಂದ ಅನುಕೂಲ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.

ಕುಟುಂಬಕ್ಕೆ ಇರುವ ಎರಡು ಎಕರೆ ಜಮೀನಿಗೆ ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್ ವ್ಯವಸ್ಥೆ ಜತೆಗೆ, ಮಕ್ಕಳ ಪೋಷಣೆ ಮತ್ತು ಶಿಕ್ಷಣ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು, 10 ದಿನದ ಬಳಿಕ ಮತ್ತೆ ಗ್ರಾಮಕ್ಕೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡದಂತೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ತಾಪಂ ಸದಸ್ಯರಾದ ಶ್ರೀನಿವಾಸ, ಜಿ.ವೀರೇಶ್, ನಗರಸಭೆ ಸದಸ್ಯರಾದ ಟಿ.ಮಲ್ಲಿಕಾರ್ಜುನ, ಬಿ.ಟಿ.ರಮೇಶ್‌ಗೌಡ, ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net