ನಗರಸಭೆ ಗದ್ದುಗೆಗಾಗಿ ತ್ರಿಕೋನ ಸ್ಪರ್ಧೆ

CLK NAGARASABHE
Published on

ಚಳ್ಳಕೆರೆ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನ.3ರಂದು ನಿಗದಿಯಾಗಿದ್ದು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಅಧಿಕಾರ ಗದ್ದಿಗೆಗೇರುವ ಲೆಕ್ಕಚಾರಗಳು ಬಹಳ ಜೋರಾಗಿ ನಡೆಯುತ್ತಿವೆ.
31 ಸಂಖ್ಯಾಬಲದ ನಗರಸಭೆಯಲ್ಲಿ 16 ಕಾಂಗ್ರೆಸ್, 10 ಜೆಡಿಎಸ್, 4 ಬಿಜೆಪಿ, 1 ಪಕ್ಷೇತರರು ಆರಿಸಿ ಬಂದಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆಗೆ ಮೀಸಲಾಗಿದೆ.
ಸದಸ್ಯ ಬಲದಲ್ಲಿ ಬಹುಮತವಿರುವ ಕಾಂಗ್ರೆಸ್‌ಗೆ ಗದ್ದುಗೆ ಏರುವ ಸ್ಪಷ್ಟ ಲಕ್ಷಣಗಳಿವೆ. ಶಾಸಕ ಟಿ.ರಘುಮೂರ್ತಿ ಅವರು ತೋರುವ ಒಲವಿನಂತೆ 15ನೇ ವಾರ್ಡ್ ಸದಸ್ಯೆ ಸಿ.ಬಿ.ಜಯಲಕ್ಷಿ ್ಮ ಅವರಿಗೆ ಅಧಿಕಾರ ಸಿಗುವ ಚರ್ಚೆಗಳು ಸದಸ್ಯರಲ್ಲಿ ಕೇಳಿ ಬರುತ್ತಿವೆ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ 17ನೇ ವಾರ್ಡ್‌ನಿಂದ ಗೆದ್ದಿರುವ ಸುಮಕ್ಕ ಅವರಿಗೂ ಅವಕಾಶ ಕಲ್ಪಿಸಿದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಯಾಗುತ್ತಿವೆ.
ಈ ಮಧ್ಯೆ ಕಾಂಗ್ರೆಸ್ ಕೆಲ ಸದಸ್ಯರ ಅಸಮಾಧಾನ ಬಳಸಿಕೊಂಡು ೇಗಾದರೂ ಮಾಡಿ ಅಧಿಕಾರದ ಗದ್ದುಗೆ ಪಡೆಯುವ ಲೆಕ್ಕಾಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ತೆರೆಮರೆ ಕಸರತ್ತು ನಡೆಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net