

ಚಳ್ಳಕೆರೆ: ಹಣ ದುರುಪಯೋಗ ಪ್ರಕರಣದ ಹಿನ್ನೆಲೆಯಲ್ಲಿ ಪುರಸಭೆ ಅವಧಿಯಲ್ಲಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಈಗ ನಿವೃತ್ತರಾಗಿರುವ ಎಂ.ಹನುಮಂತಪ್ಪ ಮತ್ತು ದ್ವಿತೀಯ ದರ್ಜೆ ಸಹಾಯಕ ಎಚ್.ಮಂಜುನಾಥ ಎಂಬುವರಿಗೆ ಜೆಎಂಎಫ್‌ಸಿ ನ್ಯಾಯಾಲಯ ಮೂರು ವರ್ಷ ಶಿಕ್ಷೆ, ತಲಾ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
1999-2000 ಮತ್ತು 2001ನೇ ಅವಧಿಯಲ್ಲಿ ಆಶ್ರಯ ವಸತಿ ಯೋಜನೆಗೆ ಮಂಜೂರಾದ ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸದೆ ದುರ್ಬಳಕೆ ಮಾಡಿಕೊಂಡಿದ್ದರು. 20.61 ಲಕ್ಷ ರೂ. ದುರುಪಯೋಗ ಆಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ತೀರ್ಪು ನೀಡಿದರು.
ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಜೆ.ಲಿಂಗೇಶ್ವರ ವಾದ ಮಂಡಿಸಿದ್ದರು. ಈ ಅಧಿಕಾರಿಗಳ ವಿರುದ್ಧ ಸೈಯದ್ ಅಲಿ ರುಜ್ಜಾನ್ ಎಂಬುವರು ನ್ಯಾಯಾಲದ ಮೆಟ್ಟಿಲೇರಿದ್ದರು.