

ಚಳ್ಳಕೆರೆ: ಆಯುರ್ವೇದ ಚಿಕಿತ್ಸೆ ಸರಳ ಮತ್ತು ಕಡಿಮೆ ವೆಚ್ಚದಾಯಕ. ಇದನ್ನು ಪಡೆಯುವುದರಿಂದ ಉತ್ತಮ ಆರೋಗ್ಯ ಹೊಂದಬಹುದೆಂದು ರಾಯದುರ್ಗ ಕ್ಷೇತ್ರದ ಶಾಸಕ ಕಾಪು ರಾಮಚಂದ್ರರೆಡ್ಡಿ ಹೇಳಿದರು.
ತಾಲೂಕಿನ ಕಾಲುವೇಹಳ್ಳಿಯಲ್ಲಿ ಸರ್ಕಾರಿ ಆಯುಷ್ ಇಲಾಖೆ, ಬೆಂಗಳೂರು ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘ, ವೆಡ್ಸ್ ಸಂಸ್ಥೆ ಸಹಯೋಗದಲ್ಲಿ ಶನಿವಾರ 2019-20ನೇ ಸಾಲಿನ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಕುಟುಂಬ ನಿರ್ವಹಣೆಗಾಗಿ ಆರೋಗ್ಯ ಲೆಕ್ಕಿಸದೆ ದುಡಿಯುವ ಪರಿಸ್ಥಿತಿ ಇರುತ್ತದೆ. ಈ ಕ್ರಮ ಸರಿಯಲ್ಲ. ಸಣ್ಣ ಆರೋಗ್ಯ ಸಮಸ್ಯೆ ಇದ್ದರೂ ನಿರ್ಲಕ್ಷಿಸದೇ ವೈದ್ಯರ ಸಲಹೆ ಪಡೆಯಬೇಕು. ಯಾವುದೇ ಅಡ್ಡಪರಿಣಾಮ ಇಲ್ಲದ ಆಯುರ್ವೇದ ಔಷಧಿ ಬಳಸಲು ದೃಢನಿರ್ಧಾರ ಮಾಡಬೇಕು. ಪ್ರತಿಯೊಬ್ಬರೂ ಉತ್ತಮ ಆರೋಗ್ಯಕ್ಕಾಗಿ ಸ್ವಯಂ ಜಾಗೃತರಾಗಿ ಯೋಗದ ಜತೆಗೆ ಆಯುರ್ವೇದ ಚಿಕಿತ್ಸಾ ಪದ್ಧತಿ ರೂಢಿಸಿಕೊಂಡಲ್ಲಿ ಜೀವನ ಆನಂದ, ಆರೋಗ್ಯಮಯವಾಗಿರುತ್ತದೆ ಎಂದರು.
ವೆಡ್ಸ್ ಸಂಸ್ಥೆಯ ಗಂಗಾಧರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಪಿ. ಜಯಪಾಲಯ್ಯ, ಎಂ. ಕರಿಯಪ್ಪ, ತಾಳವಟ್ಟಿ ರಂಗಸ್ವಾಮಿ, ಆರ್. ಪಾಲಯ್ಯ, ರೇಣುಕಪ್ಪ, ಬಸವರಾಜ್, ಡಾ. ಶಿವಲಿಂಗ, ಡಾ. ಶ್ರೀನಿವಾಸ್, ಡಾ. ಸೂರ್ಯಕಾಂತ್, ಡಾ. ನರಸಿಂಹ, ಡಾ.ಮಮತಾ, ಡಾ. ರಾಘವೇಂದ್ರ, ಡಾ. ವಿಷ್ಣುಪ್ರಿಯ, ಡಾ. ದಿಶಾಶೇಖರ್, ಡಾ. ಅಶ್ವಿನಿ, ಡಾ. ಅಕ್ಷತಾ, ಡಾ. ವರ್ಣಿತಾ ಮತ್ತಿತರರಿದ್ದರು.