ಅಂಗವಿಕಲರನ್ನು ಮುಖ್ಯವಾಹಿನಿಗೆ ತನ್ನಿ

CLK NANNIVALA 06
Published on

ಚಳ್ಳಕೆರೆ: ಅಂಗವಿಕಲರನ್ನು ಮುಖ್ಯವಾಹಿನಿಗೆ ತರುವ ಸಹಕಾರ ಮನೋಭಾವ ಹೊಂದಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋವಿಡ್-19 ಪರಿಣಾಮ ಸಾಮಾನ್ಯರ ಬದುಕು ಬಹಳ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ 3912 ಅಂಗವಿಕಲರಿಗೆ ಆಹಾರ ಕಿಟ್ ವಿತರಿಸಲಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ಛಾಯಾ ತಿಪ್ಪೇಸ್ವಾಮಿ, ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಮುಖಂಡರಾದ ಜಿ.ಬಸವರಾಜ, ದೊರೆ ಬೈಯಣ್ಣ, ರಾಜಣ್ಣ ಅಪ್ಪಣ್ಣ, ಮಾರ್ಕಂಡೇಯ್ಯ, ಚಂದ್ರಣ್ಣ, ಉಮೇಶ, ಬೊಮ್ಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net