ಗುರು ಸ್ಮರಣೆ ಉತ್ತಮ ಕಾರ್ಯ

CLK SCHOOL 15
Published on

ಚಳ್ಳಕೆರೆ: ಶಾಲೆ ಮತ್ತು ಗುರುಗಳನ್ನು ಸ್ಮರಿಸುವುದು ಉತ್ತಮ ಕಾರ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ಹೊರವಲಯದಲ್ಲಿರುವ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಸಂಸ್ಕಾರ ಕಲಿಸುತ್ತದೆ ಎಂಬುದಕ್ಕೆ ವಿದ್ಯಾರ್ಥಿಗಳ ಈ ಕಾರ್ಯ ಮಾದರಿ. ಯೋಗವಿದ್ದವರು ಉದ್ಯೋಗಸ್ಥರಾಗುತ್ತಾರೆ. ಆದರೆ, ಶಿಕ್ಷಣ ಬದುಕಿನಲ್ಲಿ ಜಾಗೃತಿ ಕಲಿಸುತ್ತದೆ ಎಂದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ಸ್ಫೂರ್ತಿ ನಿತೇಶ್‌ಕುಮಾರ್ ಮಾತನಾಡಿ, ಶಾಲೆಯಿಂದ ಗ್ರಾಮೀಣ ಭಾಗದ ಬಡಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.

ನಗರಸಭೆ ಸದಸ್ಯೆ ಸುಜಾತಾ ಪ್ರಹ್ಲಾದ್, ತಾಪಂ ಸದಸ್ಯ ಜಿ.ವೀರೇಶ್, ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ಮುಖ್ಯಶಿಕ್ಷಕಿ ಡಿ.ಆರ್.ಪ್ರಮೀಳಾ, ಸಹಶಿಕ್ಷಕರಾದ ಡಿ.ವೀರಭದ್ರಯ್ಯ, ಪಿ.ನಾಗೇಶ್ವರ, ಚಿದಾನಂದಮೂರ್ತಿ, ಕೆ.ಮಲ್ಲಪ್ಪ, ಟಿ.ವಿಜಯಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net