ಧಾರ್ಮಿಕ ಪ್ರತಿಪಾದಕ ಮಾರ್ಕಂಡೇಶ್ವರ ಶ್ರೀ

CLK DINACHARANE 27
Published on

ಚಳ್ಳಕೆರೆ: ಮಾರ್ಕಂಡೇಶ್ವರ ಶ್ರೀಗಳು ಶ್ರೇಷ್ಠ ಧಾರ್ಮಿಕ ಸಿದ್ಧಾಂತದ ಪ್ರತಿಪಾದಕರಾಗಿದ್ದರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದಲ್ಲಿ ಸೋಮವಾರ ಪದ್ಮಸಾಲಿ ಸಮುದಾಯದಿಂದ ಹಮ್ಮಿಕೊಂಡಿದ್ದ ಮಾರ್ಕಂಡೇಶ್ವರ ಶ್ರೀಗಳ ಜಯಂತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಪದ್ಮಸಾಲಿ ಸಮುದಾಯ ಕಡಿಮೆ ಜನಸಂಖ್ಯೆ ಹೊಂದಿದ್ದು, ನೇಕಾರಿಕೆ ಕಸುಬಿನಿಂದ ಜೀವನ ಕಂಡುಕೊಂಡಿದೆ. ಸಂಘಟಿತರಾಗುವ ಮೂಲಕ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವ ಕೆಲಸವಾಗಬೇಕು ಎಂದರು.

ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ದೊಡ್ಡ ಪ್ರಮಾಣದ ಜನಸಂಖ್ಯೆ ಮುಖ್ಯವಲ್ಲ. ಒಗ್ಗಟ್ಟು ರೂಢಿಸಿಕೊಳ್ಳುವ ಮೂಲಕ ಅಭಿವೃದ್ಧಿಗೆ ದಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯ ವಿ.ವೈ.ಪ್ರಮೋದ್, ಮಾರ್ಕಂಡೇಯ ಸ್ವಾಮಿ ಸಂಘದ ಅಧ್ಯಕ್ಷ ಎಂ.ಶಿವಮೂರ್ತಿ, ಕಾರ್ಯದರ್ಶಿ ರಾಮಸ್ವಾಮಿ, ಸತ್ಯನಾರಾಯಣ, ಪೆನುಗೊಂಡ ರವಿಕುಮಾರ್, ಯುವಕ ಸಂಘದ ಅಧ್ಯಕ್ಷ ರಮೇಶ, ಉಪಾಧ್ಯಕ್ಷ ರಾಘವೇಂದ್ರ, ದ್ವಾರಕೀಶ, ವೆಂಕಟೇಶ, ಯರ‌್ರಿಸ್ವಾಮಿ, ರಂಗನಾಥ, ಜಿ.ನರಸಿಂಹಮೂರ್ತಿ, ವೈ.ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net