ಬಾಬುಜಿ ಶೋಷಿತರ ಆಶಾಕಿರಣ

CLK JAYANTHI 05
Published on

ಚಳ್ಳಕೆರೆ: ಬಾಬು ಜಗಜೀವನ ರಾಮ್ ಶೋಷಿತ ಸಮುದಾಯದ ಆಶಾಕಿರಣ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ, ತಾಲೂಕು ಆಡಳಿತದಿಂದ ಭಾನುವಾರ ಸಾಂಕೇತಿಕವಾಗಿ ಆಚರಿಸಲಾದ 113ನೇ ಬಾಬು ಜಗಜೀವನ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗಜೀವನ ರಾಮ್ ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಬರಗಾಲದಿಂದ ಉಂಟಾಗಿದ್ದ ಆಹಾರ ಕ್ಷಾಮ ನಿರ್ವಹಣೆಗಾಗಿ ಕೃಷಿ ವಲಯಕ್ಕೆ ಅಮೂಲಾಗ್ರ ಬದಲಾವಣೆ ತಂದು ಹಸಿರು ಕ್ರಾಂತಿಯ ಹರಿಕಾರ ಎನಿಸಿಕೊಂಡರು ಎಂದರು.

ನಗರಸಭೆ ಸದಸ್ಯರಾದ ಕೆ.ವೀರಭದ್ರಯ್ಯ, ವೈ.ಪ್ರಕಾಶ್, ಬಿ.ಟಿ.ರಮೇಶ್ ಗೌಡ, ಸಾವಿತ್ರಮ್ಮ, ಮುಖಂಡ ಆರ್.ಪ್ರಸನ್ನ ಕುಮಾರ್, ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಪೌರಾಯುಕ್ತ ಪಿ.ಪಾಲಯ್ಯ, ಬಿಇಒ ಸಿ.ಎಸ್.ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಮಂಜಣ್ಣ, ಮಾಲತಿ, ವ್ಯವಸ್ಥಾಪಕ ಡಿ. ದಯಾನಂದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net