ವೃದ್ಧರಿಗೆ ನೆರವಾಗಲು ಪ್ರೇಮಿಗಳಿಗೆ ಸಲಹೆ

NAGARAMGERE SRINIVAS
Published on

ಚಳ್ಳಕೆರೆ: ಪ್ರೇಮಿಗಳ ದಿನಾಚರಣೆಗೆ ಸಾವಿರಾರು ರೂಪಾಯಿ ದುಂದು ವೆಚ್ಚ ಮಾಡುವ ಬದಲು ಅನಾಥಾಶ್ರಮದ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಕೈಲಾದ ಸಹಾಯ ಮಾಡಲು ಪ್ರೇಮಿಗಳು ಮುಂದಾಗಬೇಕು ಎಂದು ಜಾನಪದ ಸಾಹಿತ್ಯ ಟ್ರಸ್ಟ್ ಅಧ್ಯಕ್ಷ ನಗರಂಗೆರೆ ಶ್ರೀನಿವಾಸ್ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ಪಾಶ್ಚಿಮಾತ್ಯ ಸಂಸ್ಕೃತಿಯನ್ನು ನಮ್ಮದೆಂದು ಭಾವಿಸಿ ೆ.14ರಂದು ಪ್ರೇಮಿಗಳ ದಿನವಾಗಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಇಂತಹ ಆಚರಣೆಯಿಂದ ಯುವಜನತೆ ಹೊರಬರಬೇಕು. ಪ್ರೇಮಿಗಳ ದಿನಕ್ಕೆ ವ್ಯಯಿಸುವ ಹಣವನ್ನು ಬಡವರ ಕಲ್ಯಾಣಕ್ಕೆ ಬಳಸಿ ದೇಶಿ ಸಂಸ್ಕೃತಿ ಉಳಿವಿಗೆ ಶ್ರಮಿಸಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net