

ಚಳ್ಳಕೆರೆ: ಲೋಕ ಕಲ್ಯಾಣಾರ್ಥ ನಡೆಯುವ ದೇವತಾ ಕಾರ್ಯಗಳು ಸರ್ವರ ಒಳಿತಿಗೆ ಕಾರಣವಾಗುತ್ತವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ಹೊಟ್ಟೆಪ್ಪನಹಟ್ಟಿ ಸಮೀಪದ ಗೊಲ್ಲರಹಟ್ಟಿಯಲ್ಲಿ ಗುರುವಾರ ಶ್ರೀ ಗೊಲ್ಲಾಳೇಶ್ವರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮಸ್ಥರ ಜನರ ಬೇಡಿಕೆಯಂತೆ ಭವನ ನಿರ್ಮಾಣಕ್ಕೆ 10 ಲಕ್ಷ ಅನುದಾನ ನೀಡಲಾಗುವುದು. ದೇವಸ್ಥಾನದ ಸಮೀಪ ಭವನ ನಿರ್ಮಾಣ ಮಾಡಿಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಬಿ.ಸಿ.ಸತೀಶ್‌ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ಮುಖಂಡ ಟಿ.ಪ್ರಭುದೇವ್, ನಗರಸಭಾ ಸದಸ್ಯ ಬಿ.ಟಿ.ರಮೇಶ್‌ಗೌಡ ಮತ್ತಿತರರು ಇದ್ದರು.