

ಚಳ್ಳಕೆರೆ: ಲಾಕ್‌ಡೌನ್ ಹಿನ್ನೆಲೆ ತಮ್ಮೂರಿಗೆ ಹೋಗಲಾಗದ ಪರಸ್ಥಳದವರಿಗೆ ಮಂಗಳವಾರ ತಾಲೂಕು ಬಿಜೆಪಿ ಮಂಡಲದಿಂದ ನಗರದ ಬಾಳೆಕಾಯಿ ರಾಮದಾಸ್ ಅವರ ಲೇಔಟ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದ ರಾಯಚೂರು, ಸಿರಗುಪ್ಪ,್ಪ ಬಳ್ಳಾರಿ ಮೂಲದ ನೂರಾರು ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿ ಉದಾರತೆ ಮೆರೆದಿದೆ.
ಅಲ್ಲದೆ ಲಾಕ್‌ಡೌನ್ ಜಾರಿಯಿಂದ ಕೆಲಸವಿಲ್ಲದೆ ಹೊಟ್ಟೆಗೆ ಹಿಟ್ಟಿಲ್ಲದೆ ಬಳಲುತ್ತಿರುವ ನಗರದ ಕೆಲ ವಾರ್ಡ್‌ಗಳ ಬಡ ಕುಟುಂಬಗಳಿಗೆ ಏ.14ರ ವರೆಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖಂಡರು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದಾಪುರ ಸುರೇಶ್, ಜಿ.ಪಿ.ಜಯಪಾಲಯ್ಯ, ಖಜಾಂಚಿ ಪ್ರಸಾದ್, ಬಿ.ಎಸ್.ಶಿವಪುತ್ರಪ್ಪ, ಚಿದಾನಂದಪ್ಪ ಇತರರಿದ್ದರು.