ಹಳ್ಳಿಗಳಲ್ಲಿ ಅಡುಗೆ ಅನಿಲ ಸಮಸ್ಯೆ

CLK PURLAHALLI 10
Published on

ಚಳ್ಳಕೆರೆ: ಲಾಕ್‌ಡೌನ್ ಹಿನ್ನೆಲೆ ಗ್ರಾಮೀಣ ಭಾಗದ ಜನರಿಗೆ ಅಡುಗೆ ಅನಿಲ ದೊರೆಯುವಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ ಎಂದು ತಾಲೂಕಿನ ಪುರ‌್ಲೆಹಳ್ಳಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಶುಕ್ರವಾರ ದಿನವಿಡೀ ರಸ್ತೆ ಬದಿಯಲ್ಲಿ ಸಿಲಿಂಡರ್ ಟೆಂಪೋಗಾಗಿ ಕಾಯುತ್ತಿದ್ದೇವೆ. ಕಷ್ಟದಲ್ಲಿರುವವರಿಗೆ ಉಚಿತ ಸಿಲಿಂಡರ್ ವ್ಯವಸ್ಥೆ ಇದೆ ಎನ್ನುತ್ತಾರೆ. ಆದರೆ, 763 ರೂ. ಹಣ ಪಾವತಿಸಿ ಸಿಲಿಂಡರ್ ಪಡೆದುಕೊಂಡಿದ್ದೇವೆ. ಅದು ಕೂಡ ಸಕಾಲಕ್ಕೆ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

ತಿಂಗಳ ಅಂತ್ಯಕ್ಕೆ ನಗರಕ್ಕೆ ಬೈಕಲ್ಲಿ, ಇತರೆ ವಾಹನ ಸೌಲಭ್ಯದಲ್ಲಿ ಹೋಗಿ ಗ್ಯಾಸ್ ತಂದಿದ್ದೆವು. ಲಾಕ್‌ಡೌನ್ ಜಾರಿ ದಿನಗಳಲ್ಲಿ ವಿತರಣಾ ಕೇಂದ್ರದವರು ಯಾರೂ ಕೇಂದ್ರಕ್ಕೆ ಬರಬಾರದು. ನಾವೇ ಹಳ್ಳಿಗಳಿಗೆ ಸರಬರಾಜು ಮಾಡುತ್ತೇವೆ ಎನ್ನುತ್ತಾರೆ. ದಿನವಿಡೀ ರಸ್ತೆ ಬದಿಯಲ್ಲಿ ಕಾಯುತ್ತ ನಿಂತರು ಸರಬರಾಜು ವ್ಯವಸ್ಥೆ ಇಲ್ಲ ಎಂದು ಗ್ರಾಮಸ್ಥರಾದ ಎಚ್.ತಿಪ್ಪೇಸ್ವಾಮಿ, ಅನಂತಕುಮಾರ್, ಮಹೇಶ್, ಎಸ್.ನಾಗೇಶ್, ನಾಗರಾಜ್, ಎಸ್.ಮಂಜಣ್ಣ ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net