ಬಲಿಜ ಸಮುದಾಯಕ್ಕೆ ನೀಡಿ ನೆರವು

CLK MANAVI 21
Published on

ಚಳ್ಳಕೆರೆ: ಲಾಕ್‌ಡೌನ್‌ನಿಂದ ಸಂಕಷ್ಟ ಎದುರಿಸುತ್ತಿರುವ ಬಲಿಜ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಯೋಜನೆಯಡಿ ಧನ ಸಹಾಯ ನೀಡಬೇಕು ಎಂದು ಯೋಗಿ ನಾರಾಯಣ ಯತೀಂದ್ರ ಬಲಿಜ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಅರಿಶಿನ, ಕುಂಕುಮ, ಬಳೆ, ಹೂವು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಲಿಜ ಸಮುದಾಯ ಕಷ್ಟ ಅನುಭವಿಸುತ್ತಿದ್ದು, ಸರ್ಕಾರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ, ಉಪಾಧ್ಯಕ್ಷ ಬಿ.ಕೆ.ಸಂಜೀವ, ಕಾರ್ಯಾಧ್ಯಕ್ಷ ಬಿ.ವಿ.ಚಿದಾನಂದಮೂರ್ತಿ, ಕಾರ್ಯದರ್ಶಿ ವಿ.ವೆಂಕಟೇಶ್, ವಿಜಯಕುಮಾರ್, ಆನಂದಪ್ಪ, ಲಕ್ಷ್ಮಣಮೂರ್ತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net