ದೊಂಬಿದಾಸರಿಗೆ ನೆರವು ನೀಡಿ

CLK MANAVI 15
Published on

ಚಳ್ಳಕೆರೆ: ಲಾಕ್‌ಡೌನ್ ಜಾರಿಯಿಂದ ಜೀವನ ನಿರ್ವಹಣೆ ಕಷ್ಟವಾಗಿರುವ ಅಲೆಮಾರಿ, ದೊಂಬಿದಾಸರಿಗೆ ಸರ್ಕಾರದ ವಿಶೇಷ ಪ್ಯಾಕೇಜ್ ಯೋಜನೆಯಡಿ ಧನ ಸಹಾಯ ಮಾಡಬೇಕೆಂದು ಶುಕ್ರವಾರ ಅಲೆಮಾರಿ ದೊಂಬಿದಾಸರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ್‌ಗೆ ಮನವಿ ಸಲ್ಲಿಸಿದರು.

ಕರೊನಾ ಕಾರಣಕ್ಕೆ ಕುಲ ಕಸುಬಿಗೆ ಹೊಡೆತ ಬಿದ್ದಿದೆ. ವ್ಯಾಪಾರ ಮಾಡಲು ಗ್ರಾಮಗಳಿಗೆ ಹೋದರೆ ಅಲ್ಲಿನ ಜನ ಬಿಟ್ಟುಕೊಳ್ಳುತ್ತಿಲ್ಲ. ಕೂಲಿ ಕೆಲಸವೂ ಸಿಗದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಶೀಘ್ರವೇ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಜಿ.ಎಂ.ಕೊಟ್ರೇಶ್, ಕಾರ್ಯದರ್ಶಿ ಡಿ.ಡಿ.ಚಂದ್ರು, ಎನ್.ಕುಬೇಂದ್ರ, ರಂಗಪ್ಪ, ಮಾರಣ್ಣ, ಕೆ.ಗಂಗಾಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net