

ಚಳ್ಳಕೆರೆ: ಲಾಕ್‌ಡೌನ್ ಪರಿಸ್ಥಿತಿಯಲ್ಲೂ ಜೀವನಕ್ಕಾಗಿ ಕೂಲಿ ಕೆಲಸದಲ್ಲಿ ಕಷ್ಟಪಡುತ್ತಿರುವ ಕಾರ್ಮಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ ಹೇಳಿದರು.
ತಾಲೂಕಿನ ತಳಕು ಹೋಬಳಿ ಬಕ್ಲೋರಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲಸ ಮಾಡಲು ಉಳಿದುಕೊಂಡಿರುವ 500 ಕಾರ್ಮಿಕರಿಗೆ ಶುಕ್ರವಾರ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಕರೊನಾ ವೈರಸ್ ಬಗ್ಗೆ ಜಾಗೃತಿ ಇರಬೇಕು. ಮಾಸ್ಕ್ ಬಳಸಿಕೊಳ್ಳಬೇಕು. ಸ್ಯಾನಿಟೈಜರ್ ಇಲ್ಲವೆ ಸೋಪು ಬಳಸಿ ಕೈ ತೊಳೆದುಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳಾದ ಡಾ.ಸುದೀಪ್, ಡಾ.ಗೀತಾ, ಡಾ.ರಮೇಶ್, ಡಾ.ಮಂಜುನಾಥ, ಸಿಬ್ಬಂದಿ ನಂದಿನಿ, ಅಶ್ವಿನಿ ಮತ್ತಿತರರು ಇದ್ದರು.