ಜಮೀನಿದ್ದವರಷ್ಟೇ ಹೋರಾಟಗಾರರ?

REDDYHALLI VEERANNA
Published on

ಚಳ್ಳಕೆರೆ: ಜಮೀನು ಇದ್ದವರು ಮಾತ್ರ ರೈತ ಸಂಘಟನೆಯಲ್ಲಿ ಹೋರಾಟ ಮಾಡಬೇಕು ಎಂದಿರುವ ಕೆ.ಪಿ.ಭೂತಯ್ಯ ಅವರ ಜನವಿರೋಧಿ ಆಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ತಿಳಿಸಿದ್ದಾರೆ.

ನಮ್ಮ ತಾತ, ತಂದೆ ದೊಡ್ಡ ಆಸ್ತಿವಂತರು. ನನ್ನ ಪಾಲಿಗೆ ಬಂದಿದ್ದ 6 ಎಕರೆ ಜಮೀನನ್ನು ಹಲವು ವರ್ಷಗಳ ಕಾಲ ಕೃಷಿ ಮಾಡಿದ್ದೇನೆ. 1983ರಲ್ಲಿ ರೈತ ಸಂಘಟನೆ ಸೇರಿಕೊಂಡಾಗ ರೈತರ ಸಮಸ್ಯೆ ತಿಳಿದುಕೊಳ್ಳಲು ರಾಜ್ಯ ಮುಖಂಡರ ಜತೆ ರಾಜ್ಯಾದ್ಯಂತ ಹೋರಾಟಗಳಲ್ಲಿ ಭಾಗವಹಿಸುವಾಗ ಕೃಷಿ ಚಟುವಟಿಕೆ ಅಡ್ಡಿ ಎನಿಸಿ ಭೂಮಿ ಮಾರಾಟ ಮಾಡಿಕೊಂಡು ಸಂಪೂರ್ಣ ರೈತ ಸಂಘಟನೆಯಲ್ಲಿ ಸಕ್ರಿಯವಾಗಿದ್ದೇನೆ. ಟೀಕೆ ಮಾಡುವ ಮುನ್ನ ವಾಸ್ತವತೆ ಅರಿತುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net