16 ಮಂದಿ ಕಾರ್ಮಿಕರ ಬಿಡುಗಡೆ

CLK BIDUGADE 28
Published on

ಚಳ್ಳಕೆರೆ: ಬಾಲೇನಹಳ್ಳಿ ಸಮೀಪದ ಮುರಾರ್ಜಿ ವಸತಿಯುತ ಶಾಲೆಯಲ್ಲಿ ಇರಿಸಲಾಗಿದ್ದ 16 ಜನ ವಲಸೆ ಕಾರ್ಮಿಕರಲ್ಲಿ ಕರೊನಾ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಗುರುವಾರ ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಅವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಚಿತ್ರದುರ್ಗ ತಾಲೂಕಿನ ವಿವಿಧ ಗ್ರಾಮಗಳ 16 ಜನ ಕೂಲಿ ಕಾರ್ಮಿಕರು ಕೆಲಸ ಅರಸಿ ತಮಿಳುನಾಡಿನ ಕಡೆಗೆ ಹೋಗಿದ್ದರು. ಲಾಕ್‌ಡೌನ್ ಜಾರಿ ಆದಾಗ ತಾಲೂಕಿನ ಚೆಕ್‌ಪೋಸ್ಟ್‌ಗಳಲ್ಲಿ ತಡೆ ಹಿಡಿಲಾಗಿದ್ದ ಇವರನ್ನು ವಸತಿ ಶಾಲೆಯಲ್ಲಿ ಇರಿಸಲಾಗಿತ್ತು.

18 ದಿನಗಳ ಬಳಿಕ ಎರಡು ಹಂತದ ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಆರೋಗ್ಯ ಸಹಾಯಕರಾದ ಎನ್.ಪ್ರೇಮ್‌ಕುಮಾರ್, ಎಸ್.ಬಿ.ತಿಪ್ಪೇಸ್ವಾಮಿ, ಜಿಲ್ಲಾ ಸರ್ವೇಕ್ಷಣಾ ತಂಡದ ಎಂ.ಪ್ರಸನ್ನಕುಮಾರ್, ಎ.ಗಂಗಾಧರ, ಎಂ.ಚಂದ್ರಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net