ಜ್ಞಾನಾರ್ಜನೆ, ಆರೋಗ್ಯಕ್ಕೆ ಯೋಗ ಸಹಕಾರಿ

SJM
Published on

ಚಿತ್ರದುರ್ಗ: ಜ್ಞಾನಾರ್ಜನೆ ಮತ್ತು ಆರೋಗ್ಯಕ್ಕೆ ಯೋಗ ಸಹಕಾರಿ ಎಂದು ಎಸ್‌ಜೆಎಂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕೆ.ಸಿ.ರಮೇಶ್ ಹೇಳಿದರು.

ಚಂದ್ರವಳ್ಳಿ ಎಸ್‌ಜೆಎಂ ಕಾಲೇಜಿನಲ್ಲಿ 10 ದಿನಗಳ ಕಾಲ ನಡೆದ ಯೋಗ ತರಬೇತಿ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.

ಒತ್ತಡದಿಂದ ದೂರವಿರಿ ಉತ್ತಮ ಚಿಂತನೆ ಆಲೋಚನೆ ಬೆಳೆಸಿಕೊಳ್ಳಿ. ಶಿಕ್ಷಣದ ಜತೆಗೆ ಯೋಗ, ಧ್ಯಾನದೊಂದಿಗೆ ಏಕಾಗ್ರತೆ ರೂಢಿಸಿಕೊಂಡು ಉತ್ತಮ ಜೀವನ ನಡೆಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಯೋಗ ತರಬೇತಿ ಸಂಸ್ಥೆ ಎಲ್.ಎಸ್.ಚಿನ್ಮಯಾನಂದ, ಪ್ರಾಧ್ಯಾಪಕರಾದ ಜಿ.ಎನ್.ಬಸವರಾಜಪ್ಪ, ಎಂ.ಎಚ್.ಶ್ರೀನಿವಾಸರೆಡ್ಡಿ,ಪ್ರೊ.ಎಚ್.ಕೆ.ಶಿವಪ್ಪ ಮಾತನಾಡಿದರು.

ಯೋಗ ತರಬೇತಿ ನೀಡಿದ ಚಿನ್ಮಯಾನಂದ ಹಾಗೂ ಮನೋಹರ್ ಅವರನ್ನು ಈ ವೇಳೆ ಗೌರವಿಸಲಾಯಿತು. ಪ್ರೊ.ಆರ್.ಕೆ.ಕೇದಾರನಾಥ್ ನಿರೂಪಿಸಿದರು. ಡಾ.ಆರ್.ವಿ.ಹೆಗಡಾಳ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net