ವಸತಿ ಸಂಕೀರ್ಣ ನಿರ್ಮಾಣ ಸ್ಥಳ ಪರಿಶೀಲನೆ

CLK KEB 12
Published on

ಚಳ್ಳಕೆರೆ: ಇಲ್ಲಿನ ಕೆಇಬಿ ಹಿಂಭಾಗದಲ್ಲಿ ವಸತಿ ಸಂಕೀರ್ಣ ಸಮುಚ್ಛಯ ನಿರ್ಮಾಣ ಉದ್ದೇಶದ ಹಿನ್ನೆಲೆ ಬುಧವಾರ ಶಾಸಕ ಟಿ.ರಘುಮೂರ್ತಿ, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಈ ವೇಳೆ ಮಾತನಾಡಿ, ಖಾಲಿ ಜಾಗದಲ್ಲಿ 2 ಬ್ಲಾಕ್ ವಿಂಗಡಣೆ ಮಾಡಿಕೊಂಡು ಇಂಜಿನಿಯರ್ ಮತ್ತು ಸಿಬ್ಬಂದಿ ವರ್ಗಕ್ಕೆ 3.45 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಸತಿ ಸಂಕೀರ್ಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ನಗರಸಭೆ ಸದಸ್ಯ ವೈ.ಪ್ರಕಾಶ್, ತಾಪಂ ಸದಸ್ಯ ಜಿ.ವೀರೇಶ್, ಮುಖಂಡರಾದ ಆರ್.ಪ್ರಸನ್ನಕುಮಾರ್, ಗಾಂಧಿನಗರ ಕೃಷ್ಣ, ಪ್ರಹ್ಲಾದ, ಶ್ರೀನಿವಾಸ್, ಹನುಮಂತಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net