ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಚಳ್ಳಕೆರೆಯಲ್ಲಿ ಕರವೇ ವಿರೋಧ

Challakere Karave protest
Published on

ಚಳ್ಳಕೆರೆ: ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತಿರುವ ಸರ್ಕಾರದ ನಿರ್ಧಾರ ವಿರೋಧಿಸಿ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಸ್ತೇದಾರ್ ಮಂಜುನಾಥಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಗೌರವ ತೋರುವ ಮರಾಠಿಗರ ಅಭಿವೃದ್ಧಿ ಕುರಿತ ಸರ್ಕಾರದ ಕ್ರಮ ಖಂಡನೀಯ. ರಾಜ್ಯ ಸರ್ಕಾರ ಕನ್ನಡಿಗರಿಗೆ ದ್ರೋಹ ಮಾಡುವ ರೀತಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಮುಂದಾಗಿದೆ. ಈ ನಿರ್ಧಾರವನ್ನು ಕೂಡಲೇ ಕೈಬಿಡದಿದ್ದರೆ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕನ್ನಡ ರಾಜ್ಯೋತ್ಸವವನ್ನು ಬೆಳಗಾವಿ ಗಡಿಭಾಗದ ಮರಾಠಿಗರು ವಿರೋಧಿಸುತ್ತಾರೆ. ಕರಾಳ ದಿನವಾಗಿ ಆಚರಿಸುತ್ತಾರೆ. ಕಪ್ಪುಬಟ್ಟೆ ಪ್ರದರ್ಶನ ಮಾಡಿ ನಾಡಿನ ಕಾರ್ಯಕ್ರಮಗಳಿಗೆ ವಿರೋಧಿಸುತ್ತಾರೆ. ಇಂತಹ ಮರಾಠಿಗರ ಅಭಿವೃದ್ಧಿ ಪ್ರಾಧಿಕಾರ ಕೈಬಿಡುವಂತೆ ಆಗ್ರಹಿಸಿದರು.

ಸೇನೆ ಅಧ್ಯಕ್ಷ ಅಶೋಕ್, ಪದಾಧಿಕಾರಿಗಳಾದ ಟಿ.ಬೋರಣ್ಣ, ಜಿ.ಆರ್.ಮಂಜುನಾಥ, ಕೆ.ಅವಿನಾಶ್, ವಿನಯ್, ವಿ.ಶ್ರೀಧರ, ಸತೀಶ್‌ಗೌಡ, ಡಿ.ಮಂಜುನಾಥ, ಟಿ.ಲಕ್ಷಿ ್ಮೀಕಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net