ಜುಂಜಪ್ಪ-ಎತ್ತಪ್ಪ ದೇವರಿಗೆ ವಿಶೇಷ ಪೂಜೆ

CLK BOODIHALLI 18
Published on

ಚಳ್ಳಕೆರೆ: ತಾಲೂಕಿನ ಬೂದಿಹಳ್ಳಿಯಲ್ಲಿ ಮಂಗಳವಾರ ಶ್ರೀ ಜುಂಜಪ್ಪ ಮತ್ತು ಎತ್ತಪ್ಪ ದೇವರ ಪೂಜಾ ಕಾರ್ಯಕ್ರಮ ನೆರವೇರಿತು.

ಪ್ರತಿ ವರ್ಷ ಶಿವರಾತ್ರಿಯ ಸಂದರ್ಭದಲ್ಲಿ ಈ ಪೂಜಾ ಕಾರ್ಯ ಕೈಗೊಳ್ಳಲಾಗುತ್ತದೆ. ಇದರ ಅಂಗವಾಗಿ ಸೋಮವಾರ ಹೊಳೆಪೂಜೆ ನೆರವೇರಿಸಿ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಸಲಾಯಿತು.

ಮಂಗಳವಾರ ಪೂಜೆ ಹಣ್ಣು-ಹಂಪಲು, ಫಲಹಾರ ತುಂಬಿದ ಬೂತ್‌ಮಣೆ ಹಾಕಿದ ಭಕ್ತರು, ಅದರ ಸುತ್ತ ದೇವರ ಹಾಡುಗಳಿಗೆ ಕುಣಿಯುತ್ತಾ ಮಣೆ ಮೇಲೆ ಉರುಳಾಡಿಕೊಂಡು ಪ್ರಸಾದ ತಿನ್ನುವ ಮೂಲಕ ಭಕ್ತಿ ಸಮರ್ಪಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.

ಗ್ರಾಮದ ಮುಖಂಡರಾದ ಗೌಡರ ರಾಜಣ್ಣ, ಪೂಜಾರಿ ಕರಿಯಣ್ಣ, ಬೂದೆಪ್ಪರ ಈರಣ್ಣ, ಟಿ. ರಾಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net