ಸ್ವಾತಂತ್ರ ದಿನದ ಸಂಭ್ರಮಕ್ಕೆ ಚಳ್ಳಕೆರೆಯಲ್ಲಿ ಇಪ್ಪತ್ತೈದು ಸಾವಿರ ಧ್ವಜ ತಯಾರಿ

Challakere Independence Day National Flag
Published on

ಚಳ್ಳಕೆರೆ: ದೇಶದ ಸ್ವಾತಂತ್ರ ದಿನದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಇತ್ತ ನಗರದಲ್ಲಿ ರಾಷ್ಟ್ರಧ್ವಜ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ.

ನಗರದ ಬೆಂಗಳೂರು ರಸ್ತೆಯಲ್ಲಿನ ಗಾರ್ಮೆಂಟ್ಸ್‌ನಲ್ಲಿ 25 ಸಾವಿರ ರಾಷ್ಟ್ರಧ್ವಜ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರ ಯೋಜನೆಯಡಿ ಮಂಗಳೂರಿನ ಬ್ರಹ್ಮಾವರಂ ನಿಂದ ಕೆಲಸ ಸಿಕ್ಕಿದೆ. 15 ಇಂಚು ಅಗಲ, 27 ಇಂಚು ಉದ್ದದ ಧ್ವಜ ತಯಾರಿಸುವಲ್ಲಿ ಕಾರ್ಮಿಕರು ನಿರತರಾಗಿದ್ದಾರೆ ಎಂದು ಗಾರ್ಮೆಂಟ್ಸ್‌ನ ವ್ಯವಸ್ಥಾಪಕ ಕ್ಯಾತಣ್ಣ ತಿಳಿಸಿದ್ದಾರೆ.

ಗ್ರಾಹಕರ ಬೇಡಿಕೆಗೆ ತಕ್ಕಂತೆ ತಯಾರಿಸುತ್ತಿದ್ದೆವು. ಈ ಬಾರಿ ನಮ್ಮ ನಾಡಿನ ಧ್ವಜ ಸಿದ್ಧಪಡಿಸುವ ಭಾಗ್ಯ ದೊರತಿರುವುದು ಬದುಕಿನ ಸಾರ್ಥಕ ಕಾರ್ಯವಾಗಿದೆ ಎಂದು ಕಾರ್ಮಿಕರಾದ ಸುನಂದಮ್ಮ, ನೇತ್ರಮ್ಮ, ರೇಖಾ, ತಿಪ್ಪಮ್ಮ, ಆಶಾ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net