ಗರ್ಭಿಣಿಯರಿಗೆ ಧೈರ್ಯ ತುಂಬಿದ ಎಸ್ಪಿ

RADHIKA G sp
Published on

ಚಳ್ಳಕೆರೆ: ಮೊಳಕಾಲ್ಮೂರು ರಾಂಪುರದಲ್ಲಿದ್ದ ಉತ್ತರ ಕರ್ನಾಟಕದ 126 ಮಂದಿಗೆ ಚಳ್ಳಕೆರೆ ತಾಲೂಕೊಂದರ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಎಸ್ಪಿ ರಾಧಿಕಾ, ಮಹಿಳೆಯರು ಸೇರಿ ಎಲ್ಲರ ಸಮಸ್ಯೆ ಆಲಿಸಿದರು.

ಈ ವೇಳೆ ನಾಲ್ವರು ಗರ್ಭಿಣಿಯರು ಆತಂಕ ವ್ಯಕ್ತಪಡಿಸಿದರು. ತಕ್ಷಣ ಅವರಿಗೆ ಆತ್ಮಸ್ಥೈರ್ಯ ತುಂಬಿದ ಎಸ್ಪಿ, ನಿಮ್ಮ ಮನೆಗಿಂತಲೂ ಹೆಚ್ಚು ಕಾಳಜಿ ವಹಿಸಿಕೊಳ್ಳಲಾಗುತ್ತದೆ. ಆತಂಕ ಪಡಬೇಡಿ. ಹೆರಿಗೆ ಸಮಯ ಹತ್ತಿರವಿದ್ದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಲಾಗುವುದು ಎಂದು ಧೈರ್ಯ ತುಂಬಿದರು.

126 ಮಂದಿಯಲ್ಲಿ 30 ಚಿಕ್ಕಮಕ್ಕಳಿದ್ದು, ಗರ್ಭಿಣಿಯರ ಜತೆ ಈ ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸಬೇಕು. ಯಾವುದೇ ರೀತಿ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕು. ಹಾಲು ಸೇರಿ ಅಗತ್ಯ ಆಹಾರ ವಿತರಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net