ಮಲ್ಲಮ್ಮನ ಬದುಕು ಮಾದರಿ

CLK JAYANTI 10
Published on

ಚಳ್ಳಕೆರೆ: ದಾನ-ಧರ್ಮ, ಸಾತ್ವಿಕ ಗುಣದಿಂದಲೇ ಎಲ್ಲ ಮನಗೆದ್ದ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ಮಾದರಿ ಮಹಿಳೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕು ಆಡಳಿತದಿಂದ ಭಾನುವಾರ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಆರಾಧಕಿ, ಲೌಕಿಕ ಬದುಕಿನೊಟ್ಟಿಗೆ ಮೋಕ್ಷ ಪಡೆದುಕೊಂಡ ಶಿವಶರಣೆಯ ಆದರ್ಶವನ್ನು ಎಲ್ಲರೂ ಬದುಕಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ತಾಪಂ ಸದಸ್ಯ ಈ.ರಾಮರೆಡ್ಡಿ, ನಗರಸಭೆ ಸದಸ್ಯ ಕೆ.ವೀರಭದ್ರಯ್ಯ, ತಾಲೂಕು ಹೇಮರೆಡ್ಡಿ ಜನಸಂಘದ ಅಧ್ಯಕ್ಷ ರಘುರೆಡ್ಡಿ, ಮುಖಂಡರಾದ ಬಿ.ಆರ್.ತಿಮ್ಮಾರೆಡ್ಡಿ, ಸಿ.ದಾಸ್‌ರೆಡ್ಡಿ, ಎಚ್.ವಿ.ಪ್ರಕಾಶ್‌ರೆಡ್ಡಿ, ಆರ್.ವೆಂಕಟೇಶರೆಡ್ಡಿ, ಸಿ.ಎನ್.ಪ್ರತಾಪ್‌ರೆಡ್ಡಿ, ಆರ್.ಲಕ್ಷ್ಮಣರೆಡ್ಡಿ, ಆರ್.ಪ್ರಸನ್ನಕುಮಾರ್, ಗಾಂಧಿನಗರ ಕೃಷ್ಣ, ಸಿದ್ದಾಪುರ ಶೇಖರ್, ಖಾದರ್, ಹುಲಿಗೆಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net