ಹಳ್ಳಿ ಹೆಣ್ಮಕ್ಕಳಲ್ಲಿ ಆರೋಗ್ಯ ಜಾಗೃತಿ ಅಗತ್ಯ

CLK KAPARAHALLI 20
Published on

ಚಳ್ಳಕೆರೆ: ಮಕ್ಕಳ ಆರೋಗ್ಯ ಕಾಪಾಡಲು ಗ್ರಾಮೀಣ ಮಹಿಳೆಯರಿಗೆ ಜಾಗೃತಿ ಅಗತ್ಯವಿದೆ ಎಂದು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಟಿ.ಮಲ್ಲಮ್ಮ ಹೇಳಿದರು.

ತಾಲೂಕಿನ ಕಾಪರಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಕ್ಕಮಕ್ಕಳಲ್ಲಿ ಜ್ವರ, ದಡಾರ ಕಾಣಿಸಿಕೊಂಡಲ್ಲಿ ಮೂಢ ನಂಬಿಕೆಗಳ ಮೊರೆ ಹೋಗದೆ ವೈದ್ಯರ ಸಲಹೆ ಪಡೆಯಬೇಕು. ಪೋಲಿಯೋ ಲಸಿಕೆ ಹಾಕಿಸುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಲಸಿಕೆಯಿಂದ ಯಾವ ಮಗುವನ್ನು ವಂಚಿಸಬಾರದು. ಪಾಲಕರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದರು.

91 ಚಿಣ್ಣರಿಗೆ ಲಸಿಕೆ ಹಾಕಲಾಯಿತು. ಆಶಾ ಕಾರ್ಯಕರ್ತೆ ಪಿ.ಉಮಾದೇವಿ, ಅಂಗನವಾಡಿ ಮೇಲ್ವಿಚಾರಕಿ ಎಲ್.ತಿಪ್ಪಮ್ಮ, ಸಿ.ಲೇಪಾಕ್ಷಿ, ಮಹಾಲಕ್ಷ್ಮಿ, ಜೆ.ಶಿವಲಿಂಗಮ್ಮ, ಶಶಿಕಲಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net