ಲಾರಿ ಟೈರ್ ಸಿಡಿದು ದಂಪತಿ ಸಾವು

CTD SHIVAMMA DEATH 02
Published on

ಚಳ್ಳಕೆರೆ: ನಗರದ ಪಾವಗಡ ರಸ್ತೆಯಲ್ಲಿ ಭಾನುವಾರ ಚಲಿಸುತ್ತಿದ್ದ ಲಾರಿಯ ಟೈರ್ ಸಿಡಿದು ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ವೇಗವಾಗಿ ಚಲಿಸುತ್ತಿದ್ದ ಲಾರಿಯ ಟೈರ್ ಸಿಡಿದ ಪರಿಣಾಮ ಡಿಸ್ಕ್ ಕಟ್ಟಾಗಿ ಕಬ್ಬಿಣದ ರಿಂಗ್ ಕಳಚಿಕೊಂಡು ರಸ್ತೆಬದಿ ನಿಂತಿದ್ದ ಕಾಲುವೇಹಳ್ಳಿಯ ತಿಪ್ಪೇಸ್ವಾಮಿ (38), ಶಿವಮ್ಮ (35) ಎಂಬ ದಂಪತಿ ತಲೆಗೆ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗ್ರಾಮ ಹೊರವಲಯದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದ ದಂಪತಿ, ಹೊಟ್ಟೆಪಾಡಿಗೆ ಐಸ್‌ಕ್ಯಾಂಡಿ ಮಾರಿ ಜೀವನ ನಡೆಸುತ್ತಿದ್ದರು. ನಗರದಲ್ಲಿ ಭಾನುವಾರ ಸಂತೆಯಾದ್ದರಿಂದ ಬೆಳಗ್ಗೆಯೇ ಸಾಮಗ್ರಿಗಳ ಖರೀದಿಗಾಗಿ ಪೇಟೆಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮಸ್ಥರ ಆಗ್ರಹ: ಮೃತ ದಂಪತಿ ಸಾವಿನಿಂದ (ಬಸವರಾಜ, ಮಾರುತಿ, ಪರಶುರಾಮ, ದಿನೇಶ, ಲಕ್ಷ್ಮಿ, ಶಕುಂತಲಾ) ಆರು ಮಂದಿ ಚಿಕ್ಕ ಮಕ್ಕಳು ಅನಾಥರಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಕ್ಕಳ ವಿದ್ಯಾಭ್ಯಾಸ ಮತ್ತು ಪೋಷಣೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಕುಟುಂಬಕ್ಕೆ ಮಾನವೀಯತೆ ದೃಷ್ಟಿಯಿಂದ ಹೆಚ್ಚು ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net