ಮೊಬೈಲ್ ಫೋನ್ ಕ್ರಾಂತಿ ಸಾಧನೆ

MEHABOOB PASHA
Published on

ಚಳ್ಳಕೆರೆ: ಸಾಮಾನ್ಯರ ಕೈಯಲ್ಲಿ ಮೊಬೈಲ್ ಫೋನ್ ಬರಲು ರಾಜೀವ್‌ಗಾಂಧಿ ಅವರ ದೂರದೃಷ್ಟಿ ಕಾರಣ ಎಂದು ಕೆಪಿಸಿಸಿ ವಕ್ತಾರ ಮೆಹಬೂಬ್ ಅಭಿಪ್ರಾಯಪಟ್ಟಿದ್ದಾರೆ.

ರಾಜೀವ್‌ಗಾಂಧಿ ಅವರ ಆದರ್ಶ, ದೂರದೃಷ್ಟಿ ಚಿಂತನೆಗಳನ್ನು ಯುವಕರು ಅಳವಡಿಸಿಕೊಂಡರೆ ನಾಯಕತ್ವದ ಗುಣ ಗಳಿಸಬಹುದು ಎಂದಿದ್ದಾರೆ. ದೇಶದ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ದೇಶವನ್ನು 21ನೇ ಶತಮಾನಕ್ಕೆ ಸಜ್ಜುಗೊಳಿಸಲು ಕನಸು ಕಂಡು ಅದಕ್ಕಾಗಿ ಶ್ರಮಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net