ಹೆಣ್ಣು ಸಾಮಾಜಿಕವಾಗಿ ಬೆಳೆಯಲಿ

CLK DINACHARANE 25
Published on

ಚಳ್ಳಕೆರೆ: ಹೆಣ್ಣು ಗಂಡು ಎಂಬ ತಾರತಮ್ಯ ಮಾಡದೆ ಮಹಿಳೆಯರು ಸಾಮಾಜಿಕವಾಗಿ ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಸರ್ವಮಂಗಳಮ್ಮ ಹೇಳಿದರು.

ತಾಲೂಕಿನ ಕೊರ‌್ಲಕುಂಟೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶನಿವಾರಆಯೋಜಿಸಿದ್ದ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಎಲ್ಲೆಡೆ ಗಂಡು ಮಕ್ಕಳೇ ಶ್ರೇಷ್ಠ ಎಂಬ ಮನಸ್ಥಿತಿ ಇದೆ. ಇದರಿಂದ ಹೆಣ್ಣು ಮಕ್ಕಳ ಸಂತತಿ ಕಡಿಮೆಯಾಗುತ್ತಿದೆ. ಇದು ಅನಾರೋಗ್ಯಕರ ಸಮಾಜ ನಿರ್ಮಾಣದ ಮುನ್ನುಡಿ. ಈಗಲೇ ಎಚ್ಚೆತ್ತು ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರಾದ ಸಿ. ಜಯಲಕ್ಷ್ಮಿ, ಎನ್. ಸುಶೀಲಮ್ಮ, ಸಹಾಯಕಿ ಎಚ್. ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net