

ಚಳ್ಳಕೆರೆ: ತಾಲೂಕಿನ ಚನ್ನಮ್ಮನಾಗತಿಹಳ್ಳಿಯಲ್ಲಿ ಮಾ.1ರಂದು ಶ್ರೀ ಪಾತಲಿಂಗೇಶ್ವರ ಸ್ವಾಮಿ ಜಾತ್ರೆ ಜರುಗಲಿದೆ. ಮಹೋತ್ಸವದಲ್ಲಿ ಸ್ವಾಮಿಯನ್ನು ಬೆಳ್ಳಿರಥದಲ್ಲಿ ಪ್ರತಿಷ್ಟಾಪಿಸಿ ಮೆರವಣಿಗೆ ಬಳಿಕ ರುದ್ರಾಭಿಷೇಕ ಸೇರಿ ಮಹಾಪೂಜಾ ವಿಧಾನಗಳು ನಡೆಯಲಿವೆ.
ಸಂಸದ ಎ.ನಾರಾಯಣಸ್ವಾಮಿ, ಶಾಸಕ ಟಿ.ರಘುಮೂರ್ತಿ, ಮುಖಂಡರಾದ ಕಿರಣ್ ಶಂಕರ್, ಕೇಶವ ಇತರರು ಭಾಗವಹಿಸಲಿದ್ದಾರೆ ಎಂದು ಮಡಿವಾಳ ಸಮುದಾಯದ ಮುಖಂಡ, ನಿವೃತ್ತ ಬೆಸ್ಕಾಂ ಅಧಿಕಾರಿ ಪಿ.ರುದ್ರಮೂರ್ತಿ ತಿಳಿಸಿದ್ದಾರೆ.