

ಚಳ್ಳಕೆರೆ: ತಾಲೂಕಿನ ದುರ್ಗಾವರ ಗ್ರಾಮದಲ್ಲಿ ಮಾ.3ರಂದು ಶ್ರೀ ದುರುಗಮ್ಮ ದೇವಸ್ಥಾನ ಲೋಕಾರ್ಪಣೆ ಮತ್ತು ಜೀರ್ಣೋದ್ಧಾರ, ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ ಗಂಗಾಪೂಜೆ, ಪೂಜಾರಿಯ ಪಟ್ಟಾಭಿಷೇಕ, ಗ್ರಾಮದ ಒಳಿತಿಗಾಗಿ ಹೋಮ-ಹವನ, ಭಜನಾ ಕಾರ್ಯ ನಡೆಯಲಿದೆ. ಮಾ.4ರಂದು ದೇವಸ್ಥಾನ ಲೋಕಾರ್ಪಣೆಗೊಳ್ಳಲಿದೆ.
ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆ ವಹಿಸುವರು. ಗ್ರಾಪಂ ಸದಸ್ಯ ಡಿ.ಆರ್.ಬಂಡೆರಂಗಪ್ಪ, ಸಂಸದ ಎ.ನಾರಾಯಣಸ್ವಾಮಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಡಿ.ಸುಧಾಕರ್, ಜೆಡಿಎಸ್ ಮುಖಂಡ ಕೆ.ಟಿ.ಕುಮಾರಸ್ವಾಮಿ, ಎಂ.ರವೀಶ್‌ಕುಮಾರ್, ಬಿ.ಸಿ.ಸಂಜೀವಮೂರ್ತಿ, ಪಿ.ಟಿ.ತಿಪ್ಪೇಸ್ವಾಮಿ, ಟಿ.ತಿಪ್ಪೇಸ್ವಾಮಿ, ಟಿ.ರವಿಕುಮಾರ್, ಎನ್.ಓಬಳೇಶ್, ಬಿ.ಪಿ.ಪ್ರಕಾಶ್‌ಮೂರ್ತಿ ಪಾಲ್ಗೊಳ್ಳಲಿದ್ದಾರೆ.