2,350 ಖಾದಿ ಮಾಸ್ಕ್ ವಿತರಣೆ

CLK MASK 02
Published on

ಚಳ್ಳಕೆರೆ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಂಘಗಳಿಂದ ತಯಾರಿಸಿರುವ 2,350 ಖಾದಿ ಬಟ್ಟೆಯ ಮಾಸ್ಕ್‌ಗಳನ್ನು ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಲಾಗಿದೆ ಎಂದು ಚೌಳೂರು ಉಣ್ಣೆ ಕೈಮಗ್ಗದ ನೇಕಾರರ ಉತ್ಪಾದನಾ ಸಹಕಾರ ಸಂಘದ ಬಸವರಾಜ್ ತಿಳಿಸಿದ್ದಾರೆ.

ಕರೊನಾ ವೈರಸ್ ನಿಯಂತ್ರಣಕ್ಕೆ ಕರ್ತವ್ಯದಲ್ಲಿ ತೊಡಗಿರುವ ವಿವಿಧ ಇಲಾಖೆಗಳ ಸಿಬ್ಬಂದಿಗೆ ಉಚಿತವಾಗಿ ವಿತರಿಸಲು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net