ಸಹಾಯದಿಂದ ಆತ್ಮಸ್ಥೈರ್ಯ ಹೆಚ್ಚಳ

CLK JAJURU 05
Published on

ಚಳ್ಳಕೆರೆ: ಕಷ್ಟದ ಪರಿಸ್ಥಿತಿಯಲ್ಲಿ ಸಣ್ಣ ಸಹಕಾರವು ಬದುಕಿನ ಆತ್ಮರ್ಸ್ಥೈರ್ಯ ಹೆಚ್ಚಿಸುತ್ತದೆ ಎಂದು ರಾವ್ಸ್ ಕುಟುಂಬ ಸಹಾಯ ಟ್ರಸ್ಟ್‌ನ ಮುಖಂಡ ಜೆ.ಬಿ.ರಾಮಕೃಷ್ಣ ಹೇಳಿದರು.

ತಾಲೂಕಿನ ಜಾಜೂರಿನಲ್ಲಿ 600 ಮನೆಗಳಿಗೆ ರಾವ್ಸ್ ಕುಟುಂಬ ಸಹಾಯ ಟ್ರಸ್ಟ್‌ನಿಂದ ಪ್ರತಿ ಮನೆಗೆ 8 ಕೆಜಿ ರಾಗಿ, ಅಡುಗೆ ಎಣ್ಣೆ, ಸಕ್ಕರೆ, ಬೇಳೆ ವಿತರಿಸಿ ಮಾತನಾಡಿದರು.

ಕರೊನಾ ವೈರಸ್‌ನಿಂದ ಇಡೀ ದೇಶದ ಬಡ ಜನತೆ ಸಂಕಷ್ಟದಲ್ಲಿದ್ದಾರೆ. ಪರಸ್ಪರ ಸಹಕಾರದಿಂದ ಕಷ್ಟದ ಪರಿಸ್ಥಿತಿ ಧೈರ್ಯವಾಗಿ ಎದುರಿಸಬೇಕಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಭೀಮಕ್ಕ, ಸದಸ್ಯ ರವಿ, ಪಿಡಿಒ ಎನ್.ಆರ್.ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net