ಇಂದು ಜಿಲ್ಲಾ ಕಚೇರಿ ಎದುರು ಧರಣಿ

Bheemanakere shivamurthy
Published on

ಚಳ್ಳಕೆರೆ: ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆಯಿಂದ ಮಾ.10ರಂದು ಜಿಲ್ಲಾ ಕಚೇರಿ ಎದುರು ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅನುದಾನದ ಲೆಕ್ಕಪರಿಶೋಧನೆ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಧರಣಿ ನಡೆಸಲಾಗುವುದು ಎಂದು ವೇದಿಕೆ ಜಿಲ್ಲಾ ಸಂಚಾಲಕ ಭೀಮನಕೆರೆ ಶಿವಮೂರ್ತಿ ತಿಳಿಸಿದ್ದಾರೆ.

ದಲಿತರು, ಆದಿವಾಸಿಗಳ ಅಭಿವೃದ್ಧಿ, ಯೋಜನೆ ಅನುದಾನ, ಅನುಷ್ಠಾನಕ್ಕಾಗಿ ಈ ಹಕ್ಕೊತ್ತಾಯ ಮಂಡನೆ ಆಗಬೇಕಿದೆ. ದಲಿತ-ಆದಿವಾಸಿಗಳು ಸಮಾನ ಸಂಖ್ಯೆಯಲ್ಲಿದ್ದು, ಈ ಸಮುದಾಯದ ಹೆಣ್ಣು ಮಕ್ಕಳಿಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಹಣದಲ್ಲಿ ಶೇ.50ರಷ್ಟು ಮೀಸಲಿಡಬೇಕು. ಪ್ರತ್ಯೇಕ ಯೋಜನೆ ಜಾರಿಗೊಳಿಸಬೇಕು ಪ್ರಗತಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net