ಕರೊನಾ ಕರ್ಫ್ಯೂಗೆ ಚಳ್ಳಕೆರೆ

CLK BAND may 24-2020 (4)
Published on

ಚಳ್ಳಕೆರೆ: ಕರೊನಾ ವೈರಸ್ ತಡೆಗಾಗಿ ಸರ್ಕಾರ ಭಾನುವಾರ ರಾಜ್ಯಾದ್ಯಂತ ಜಾರಿಗೊಳಿಸಿದ್ದ ಒಂದು ದಿನದ ಕರ್ಫ್ಯೂ ಚಳ್ಳಕೆರೆಯಲ್ಲಿ ಯಶಸ್ವಿಯಾಯಿತು.

ಮುಂಜಾನೆ ಹಾಲು, ಹಣ್ಣು, ತರಕಾರಿ, ಪತ್ರಿಕೆ, ದಿನಸಿ ಖರೀದಿ ಹೊರತು ಬೆರಳೆಣಿಕೆ ಸಂಖ್ಯೆಯಲ್ಲಿ ಬೈಕ್, ಕಾರ್‌ಗಳು ಸಂಚರಿಸುತ್ತಿದ್ದವು. ಬಸ್, ಲಾರಿ, ಟ್ರಾೃಕ್ಟರ್ ಇತರ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ನೇಹರು ವೃತ್ತ, ಹೊಸ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ರಸ್ತೆ, ತಾಲೂಕು ಕಚೇರಿ ಇನ್ನಿತರ ಮುಖ್ಯ ಹಾಗೂ ಬಡಾವಣೆಗಳ ರಸ್ತೆಗಳು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಅನಾವಶ್ಯಕ ಓಡಾಟ ತಡೆಗಾಗಿ ಕೆಲ ರಸ್ತೆಗಳಲ್ಲಿ ಪೊಲೀಸರು ಬೀಡುಬಿಟ್ಟಿದ್ದರು.

ಮಾಂಸ ಮಾರಾಟ ಜೋರು: ಕರ್ಫ್ಯೂ ಜಾರಿಯಿಂದ ಮಾಂಸ ಮಾರಾಟಕ್ಕೆ ಬ್ರೇಕ್ ಬೀಳುತ್ತೇನೋ ಎಂಬ ಆತಂಕದಲ್ಲಿದ್ದ ಜನರಿಗೆ ಸರ್ಕಾರವೇ ಅವಕಾಶ ನೀಡಿದ್ದರಿಂದ ಚಿಕನ್ ಮತ್ತು ಮಟನ್ ಅಂಗಡಿಗಳಲ್ಲಿ ಮಾಂಸ ಖರೀದಿ ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net