ಪೌರಕಾರ್ಮಿಕರ ಪಾದ ತೊಳೆದು ಸನ್ಮಾನ

CLK BJP .14
Published on

ಚಳ್ಳಕೆರೆ: ಕರೊನಾ ಸೇನಾನಿಗಳಾದ ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿ ಮತ್ತು ವೈದ್ಯರ ಪಾದಪೂಜೆ ಮಾಡಿ ಸನ್ಮಾನಿಸುವ ಮೂಲಕ ತಾಲೂಕು ಬಿಜೆಪಿ ಘಟಕ ಅಂಬೇಡ್ಕರ್ ಜಯಂತಿ ಆಚರಿಸಿತು.

ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿದರು.

ಅಂಬೇಡ್ಕರ್ ಬದುಕಿನ ಹೋರಾಟ ಮತ್ತು ಸಾಮಾಜಿಕ ಚಿಂತನೆ ವಿಶ್ವಕ್ಕೆ ಮಾದರಿಯಾಗಿದೆ. ಅವರು ಕೊಟ್ಟ ಲಿಖಿತ ಸವಿಂಧಾನದಿಂದ ಸರ್ವರಿಗೂ ಸಮಾನ ಅವಕಾಶ ದೊರೆಯುವಂತಾಗಿದೆ ಎಂದರು.

ಕರೊನಾ ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು ನಮ್ಮಂತೆಯೇ ಮನುಷ್ಯರು. ಅವರ ಆರೋಗ್ಯಕ್ಕಾಗಿ ನಾವು ಮನೆಯಲ್ಲೇ ಇದ್ದು ಪ್ರಾರ್ಥಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಮಂಡಲ ಮಾಜಿ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ಪ್ರಧಾನ ಕಾರ್ಯದರ್ಶಿ ಕರೀಕೆರೆ ತಿಪ್ಪೇಸ್ವಾಮಿ, ಮುಖಂಡರಾದ ಬಿ.ಎಸ್. ಶಿವಪುತ್ರಪ್ಪ, ದಿನೇಶ್ ರೆಡ್ಡಿ, ಸಿ.ಎಸ್. ಪ್ರಸಾದ್, ಗೋಪನಹಳ್ಳಿ ಮಂಜಣ್ಣ, ಕಾಂತರಾಜ್, ಮಾರುತಿ, ವಿಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net