ಚಳ್ಳಕೆರೆ 9ನೇ ವಾರ್ಡ್‌ಗೆ ಟ್ಯಾಂಕರ್ ನೀರು

CLK WATER 03
Published on

ಚಳ್ಳಕೆರೆ: ಮೋಟರ್ ದುರಸ್ತಿಯಿಂದ ಎರಡು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ನಗರದ 9ನೇ ವಾರ್ಡ್ ನಿವಾಸಿಗಳಿಗೆ ಗುರುವಾರ ನಗರಸಭೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಯಿತು.

ವಾರ್ಡ್‌ಗೆ ಟ್ಯಾಂಕರ್ ಬಂದೊಡನೇ ಕರೊನಾ ಭೀತಿ ಲೆಕ್ಕಿಸದ ಜನತೆ ಗುಂಪಾಗಿ ಬಂದು ನೀರು ಹಿಡಿಯಲು ಮುಗಿಬಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ವಾರ್ಡ್ ಸದಸ್ಯ ವಿ.ವೈ.ಪ್ರಮೋದ್, ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ನೀರು ಹಿಡಿದುಕೊಳ್ಳುವ ವ್ಯವಸ್ಥೆ ಮಾಡಿದರು.

ಕಳೆದ ಒಂದು ತಿಂಗಳ ಹಿಂದೆ ರಾಜಸ್ತಾನದ ಅಜ್ಮೀರ್ ನಗರಕ್ಕೆ ಹೋಗಿ ಬಂದವರು ವಾರ್ಡ್‌ನಲ್ಲಿದ್ದಾರೆ. ಇವರ ಆರೋಗ್ಯ ತಪಾಸಣೆ ನಡೆಸಿದ್ದು, ಯಾರಲ್ಲೂ ಕರೊನಾ ಸೋಂಕು ಕಾಣಿಸಿಕೊಂಡಿಲ್ಲ. ಈ ಬಗ್ಗೆ ಜನತೆ ಅನಗತ್ಯವಾಗಿ ಆತಂಕ ಪಡಬೇಕಿಲ್ಲ. ಇವರ ಆತ್ಮಸ್ಥೈರ್ಯ ಕುಗ್ಗುವ ರೀತಿ ಯಾರೂ ವರ್ತಿಸಬಾರದು ಎಂದು ಮನವಿ ಮಾಡಿದರು.

ಸ್ಥಳೀಯ ನಿವಾಸಿಗಳಾದ ತಿಪ್ಪೇಸ್ವಾಮಿ, ರಾಜಪ್ಪ, ರಾಘವೇಂದ್ರ, ದುರುಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net