ಕರೊನಾ ತಡೆಗೆ ಮುಂಜಾಗ್ರತೆ

P PURA CLKK 29 (2)
Published on

ಚಳ್ಳಕೆರೆ: ಕರೊನಾ ತಡೆಗೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ಜತೆಗೆ ಕುಡಿವ ನೀರು ಸಮಸ್ಯೆ ಆಗದಂತೆ ಜಾಗ್ರತೆ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಸೂಚಿಸಿದರು.

ತಾಪಂ ಕಾರ್ಯಾಲಯದಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ಪಡೆದರು.

ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸುವಂತೆ ಶುದ್ಧ ಕುಡಿವ ನೀರಿನ ಘಟಕಗಳನ್ನು ದುರಸ್ತಿಗೊಳಿಸುವಂತೆ ಇಂಜಿನಿಯರ್ ತಿಪ್ಪೇಸ್ವಾಮಿಗೆ ಸೂಚಿಸಿದರು.

ತಾಲೂ0ಕು ಅಧಿಕಾರಿಗಳು, ಅನುಷ್ಟಾನಾಧಿಕಾರಿಗಳು ಕರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಕೇಂದ್ರ ಸ್ಥಾನದಲ್ಲಿರುವಂತೆ ಹೇಳಿದಲರು.

ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ನಗರಸಭೆ ಆಯುಕ್ತ ಪಾಲಯ್ಯ, ತಾಪಂ ಇಒ ಶ್ರೀಧರ್ ಬಾರಿಕೇರ, ಸದಸ್ಯ ವೀರೇಶ, ಪೊಲೀಸ್ ಉಪಾಧೀಕ್ಷಕ ರೋಷನ್ ಜಮೀರ್, ಸಿಪಿಐ ಆನಂದಪ್ಪ, ನಗರಸಭೆ ಸದಸ್ಯರಾದ ರಮೇಶಗೌಡ, ಮಲ್ಲಿಕಾರ್ಜುನ, ಮುಖಂಡರಾದ ಜಯವೀರಾಚಾರ್, ಪ್ರಸನ್ನಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net