

ಚಳ್ಳಕೆರೆ: ಜಿಲ್ಲಾಧಿಕಾರಿ ಆದೇಶದಂತೆ ತಾಲೂಕಿನ ಗಡಿಭಾಗದ ಪಗಡಲಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಂಧ್ರ ಪ್ರದೇಶದ ಗಡಿಯಾಗಿರುವ ಬಂಡೆ ಮಾರಮ್ಮನ ದೇವಸ್ಥಾನದ ಬಳಿ ಸೋಮವಾರ ಚೆಕ್‌ಪೋಸ್ಟ್ ತೆರೆಯಲಾಯಿತು.
ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುತ್ತುರಾಜ್ ಮಾತನಾಡಿ, ಸರ್ಕಾರದ ಆದೇಶದಂತೆ ಪಂಚಾಯಿತಿ ಹಂತದಲ್ಲಿ ಆರೋಗ್ಯ ಜಾಗೃತಿ ತಂಡ ರಚಿಸಲಾಗಿದೆ ಎಂದರು.
ಪುಟ್ಲರಹಳ್ಳಿ, ಕೊರ‌್ಲಕುಂಟೆ, ಬೊಮ್ಮನಕುಂಟೆ, ವೃಂದಾವನಹಳ್ಳಿ, ಹರವಿಗೊಂಡನಹಳ್ಳಿ, ಪಗಡಲಬಂಡೆ, ಅಲ್ಲಾಪುರ ಊರುಗಳಲ್ಲಿ ಈಗಾಗಲೇ ಮುಂಜಾಗ್ರತ ಕ್ರಮವಾಗಿ ಕುಡಿವ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪಂಚಾಯಿತಿ ಸಿಬ್ಬಂದಿ ಟಿ.ದೇವರಾಜ್, ನಾಗೇಂದ್ರ, ಕಾಂತರಾಜು ಇತರರಿದ್ದರು.